– ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಸಾಗರ
ಬೆಂಗಳೂರು: ದೀಪಾವಳಿ ಹಾಗೂ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಊರುಗಳತ್ತ ಜನ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ವೃತ್ತಗಳು ಟ್ರಾಫಿಕ್ ಜಾಮ್ ಆಗಿವೆ.
ಗುರುವಾರ ದೀಪಾವಳಿ ರಜೆ, ನವೆಂಬರ್ 1, 2 ಹಾಗೂ 3 ರಂದು ಸಾಲು ಸಾಲು ರಜೆ ಇದೆ. ಹಬ್ಬಕ್ಕೆ ಎಂದು ಜನ ಊರುಗಳತ್ತ ಮುಖ ಮಾಡಿದ್ದಾರೆ. ಸಾವಿರಾರು ಜನರಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತುಂಬಿ ತುಳುಕುತ್ತಿದೆ. ಹಬ್ಬಕ್ಕೆಂದು ಸಾರಿಗೆ ಇಲಾಖೆ ಎರಡು ಸಾವಿರ ಬಸ್ ಬಿಟ್ಟಿದೆ.
ಸಂಜೆ ಆಗುತ್ತಿದ್ದಂತೆ ಹೊಸೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಹೊಸೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಸಾವಿರಾರು ವಾಹನಗಳು ಹೊರಟಿದ್ದವು. ಸಂಜೆಯಿಂದಲೇ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನಗಳು ಟ್ರಾಫಿಕ್ ಜಾಮ್ ಆಗಿದ್ದ ದೃಶ್ಯ ಕಂಡುಬಂತು.