ಮಂಗಳೂರು: ಜಿಲ್ಲೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಇವರೆಲ್ಲರಿಗೂ ದೀಪಾವಳಿಯ ಸಂಭ್ರಮ ಮನೆಯವರ ಜೊತೆ ಇರಲ್ಲ. ಅದಕ್ಕೆ ಶಿಕ್ಷಣ ಸಂಸ್ಥೆಗಳು ಕಾಲೇಜು ಕ್ಯಾಂಪಸ್ ನಲ್ಲೇ ದೀಪಾವಳಿ ಆಚರಣೆ ಮಾಡುತ್ತಾರೆ.
ನೋಡಿ, ನಿಜವಾದ ದೀಪಾವಳಿ ಅಂದರೆ ಇದಲ್ವಾ. ಈ ದೃಶ್ಯ ಕಂಡುಬಂದಿದ್ದು ಮಂಗಳೂರಿನ ಕೊಟ್ಟಾರದ ಕರಾವಳಿ ಗ್ರೂಪ್ ಆಫ್ ಕಾಲೇಜ್ ನಲ್ಲಿ. ದೀಪಾವಳಿ ರಜೆಯಲ್ಲಿ ಊರಿಗೆ ಹೋಗಲಾಗದ ವಿದ್ಯಾರ್ಥಿಗಳು ವ್ಯಥೆ ಪಡಬಾರದೆಂದು ಕಾಲೇಜಿನ ಆವರಣದಲ್ಲೇ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡಿದ್ರು. ದೀಪ ಹಚ್ಚೋದ್ರ ಜೊತೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ರು.
Advertisement
ಕೆಲವರು ಜಾನಪದ ಹಾಡಿಗೆ ಹೆಜ್ಜೆ ಹಾಕಿದ್ರೆ, ಇನ್ನೂ ಕೆಲವರು ಸಿನಿಮಾ ಹಾಡಿಗೆ ಮೈ-ಕೈ ಕುಣಿಸಿದ್ರು, ಡ್ರಾಮಾ ಮಾಡಿದ್ರು. ಜಾತಿ-ಮತದ ಬೇಧ ಮರೆತು ದೀಪ ಉರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಪರಿಸರ ಮಾಲಿನ್ಯ ಆಗಬಾರದು ಅಂತ ಸಣ್ಣ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಖುಷಿಪಟ್ರು.