LatestMain PostNational

ಅಯೋಧ್ಯೆಯಲ್ಲಿ ಅದ್ಧೂರಿ ದೀಪಾವಳಿ – ಗಿನ್ನಿಸ್ ರೆಕಾರ್ಡ್ ಸೇರಲಿದೆ ಬೆಳಕಿನ ಹಬ್ಬ

ಲಕ್ನೋ: ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ವಿಶೇಷವಾಗಿರಲಿದ್ದು, ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಲಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುವ ಲೆಕ್ಕಚಾರದಲ್ಲಿರುವ ಉತ್ತರ ಪ್ರದೇಶ ಸರ್ಕಾರದ ಗಿನ್ನಿಸ್ ದಾಖಲೆ ಬರೆಯಲು ಮುಂದಾಗಿದೆ.

ಈ ಬಾರಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪಾವಳಿ ವಿಶೇಷವಾಗಿರಲಿದ್ದು, 12 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಲು ತಯಾರಿ ನಡೆದಿದೆ. ಈಗಾಗಲೇ ಅಯೋಧ್ಯೆಯ ಕೇಂದ್ರ ಬಿಂದು ರಾಮ್ ಪೌಡಿಯಲ್ಲಿ 9 ಲಕ್ಷ ಮತ್ತು ರಾಮ ಜನ್ಮಭೂಮಿ ಸಂಕೀರ್ಣ ಸೇರಿ ನಗರದ ಬೇರೆ ಬೇರೆ ಭಾಗದಲ್ಲಿ ಮೂರು ಲಕ್ಷ ದೀಪಗಳನ್ನು ಬೆಳಗಲಿದ್ದು ಇದು ಹೊಸ ದಾಖಲೆಯಾಗಲಿದೆ.

ಈಗಾಗಲೇ ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ತಂಡ ಅಯೋಧ್ಯೆಯ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ. ನಾಳೆ ಈ ಎಲ್ಲ ದೀಪಗಳು ಬೆಳಗಲಿದ್ದು, ಬಳಿಕ ಅಯೋಧ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಲಿದೆ. ಈ ಹಿಂದೆ 2017 ರಲ್ಲಿ 1,80,000, 2018 ರಲ್ಲಿ 3,01,152, 2019 ರಲ್ಲಿ 5,50,000, 2020 ರಲ್ಲಿ 5,51000 ದೀಪಗಳನ್ನು ಬೆಳಗಲಾಗಿತ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ- ಸಂಪುಟ ಸಭೆಯಲ್ಲಿ ದಿನಾಂಕ ನಿಗದಿ: ಸಿಎಂ ಸ್ಪಷ್ಟನೆ

2017 ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯಲ್ಲಿ ದೊಡ್ಡ ಮಟ್ಟದ ದೀಪೋತ್ಸವ ಕಾರ್ಯಕ್ರಮ ಆರಂಭಿಸಿದ್ದರು. ಸದ್ಯ ಈ ಸರ್ಕಾರದ ಅವಧಿಯ ಕೊನೆಯ ದೀಪಾವಳಿಯಾಗಿರುವ ಹಿನ್ನಲೆ ಅದ್ಧೂರಿಯಾಗಿ ಆಚರಿಸುವುದು ಮಾತ್ರವಲ್ಲದೇ ಹೊಸ ದಾಖಲೆ ಬರೆಯಲು ನಿರ್ಧರಿಸಿದೆ. ಅಲ್ಲದೇ ಈ ಮೂಲಕ ಮತಗಳ ಕ್ರೂಡಿಕರಣದ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

Leave a Reply

Your email address will not be published. Required fields are marked *

Back to top button