ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಹಬ್ಬಗಳನ್ನು ಹೊಂದಿದ ದೇಶ. ನಮ್ಮ ಸಮಾಜದಲ್ಲಿ ಪ್ರತಿಯೊಂದು ಹಬ್ಬವೂ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದರೂ, ‘ದೀಪಾವಳಿ’ ಎಂದೂ ಕರೆಯಲ್ಪಡುವ ದೀಪಾವಳಿಯು (Deepavali) ಸಂತೋಷ, ಉತ್ಸಾಹ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರಕಟಿಸುವ ಹಬ್ಬವಾಗಿ ಗುರುತಿಸಲ್ಪಡುತ್ತದೆ.
ಬೆಳಕಿನ ಹಬ್ಬದಂದು ನಾವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ದೀಪಗಳಿಂದ ಬೆಳಗಿಸುತ್ತೇವೆ. ಇದು ಕತ್ತಲೆಯ ವಿರುದ್ಧ ಬೆಳಗುವ ಬೆಳಕಿನ ಸಂಕೇತ, ಅಜ್ಞಾನದ ವಿರುದ್ಧ ಜ್ಞಾನದ ಜಯದ ಸಂಕೇತ, ದುಷ್ಟರ ವಿರುದ್ಧ ಶಿಷ್ಟರ ಜಯದ ಸಂಕೇತ. ಕೆಟ್ಟದ್ದರ ವಿರುದ್ಧ ಒಳ್ಳೆಯತನದ ಜಯದ ಸಂಕೇತ ಎಂದು ಅರ್ಥೈಸಬಹುದು.
Advertisement
Advertisement
ವಯಸ್ಸಿನ ಅಂತರವಿಲ್ಲದೇ ದೀಪಾವಳಿ ಹಬ್ಬವನ್ನು ಆಚರಿಸುವುದು ವಿಶೇಷ. ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ದೀಪಾವಳಿ ಆರಂಭವಾಗುತ್ತದೆ. ಮಕ್ಕಳು ಮನೆ ಮುಂದೆ ತಳಿರು ತೋರಣ ಕಟ್ಟಿದ್ದರೆ ಹೆಣ್ಣು ಮಕ್ಕಳು ದೊಡ್ಡ ರಂಗೋಲಿ ಬಿಡಿಸಿ ಮನೆಯ ಅಂಗಳವನ್ನು ಅಲಂಕರಿಸುತ್ತಾರೆ. ನರಕ ಚತುದರ್ಶಿಯಂದು ಮನೆಯ ಪ್ರತಿಯೊಬ್ಬ ಸದಸ್ಯರೂ ಬೆಳಗ್ಗೆ ಅಭ್ಯಂಜನ ಸ್ನಾನ (Abhagyan Snan) ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಸ್ನಾನದ ಮನೆಯಲ್ಲಿ ಒಂದು ದೊಡ್ಡ ಹಂಡೆ ಇರುತ್ತಿತ್ತು. ಈ ಹಂಡೆಗೆ ನೀರನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಅಂದು ಹೆಂಗಳೆಯರು ಸ್ನಾನಗೃಹಗಳಲ್ಲಿ ಇರುವ ಹಂಡೆ, ಕೊಳಗಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಅಲಂಕರಿಸಿದರೆ ಗಂಡು ಮಕ್ಕಳು ಸ್ನಾನಗೃಹದಲ್ಲಿ ಇರುವ ಎಲ್ಲಾ ಪಾತ್ರೆಗಳಿಗೂ ನೀರು ತುಂಬಿಸಿಡುತ್ತಾರೆ. ಇಂದು ಬಚ್ಚಲು ಮನೆಗಳಲ್ಲಿ ನೀರಿನ ಹಂಡೆಗಳೇ ಕಾಣೆಯಾಗಿದೆ. ಬದಲಾದ ಸಂದರ್ಭಗಳಲ್ಲಿ ಸಾಂಕೇತಿಕವಾಗಿ ಮನೆಯಲ್ಲಿ ಇರಬಹುದಾದ ಬಾಯ್ಲರ್ ಅಥವಾ ಗೀಸರ್‌ಗಳನ್ನು ಅಲಂಕರಿಸುವ ಮೂಲಕ ಆಚರಿಸಬಹುದು. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ
Advertisement
ದಸರಾ ಸಮಯದಲ್ಲಿ ಆಯುಧ ಪೂಜೆಯ ದಿನ ನಮ್ಮನ್ನು ರಕ್ಷಿಸುವ ಆಯುಧಗಳನ್ನು ಅಲಂಕರಿಸಿ ಪೂಜೆ ಮಾಡುತ್ತೇವೆ. ಅದೇ ರೀತಿಯಾಗಿ ನರಕ ಚತುದರ್ಶಿಯಂದು (Naraka Chaturdashi) ನಮ್ಮ ಮನೆ ಬಳಕೆಯ ವಸ್ತುಗಳನ್ನು ಅಲಂಕರಿಸುತ್ತೇವೆ. ಈ ಮೂಲಕ ವರ್ಷಕ್ಕೊಮ್ಮೆ ಮನೆ ಬಳಕೆಯ ವಸ್ತುಗಳನ್ನು ಚೆನ್ನಾಗಿ ನೋಡಿಕೊಳ್ಳುವ ಭಾವನೆಯನ್ನು ಹಿರಿಯರು ತಂದಿದ್ದಾರೆ.
Advertisement
ದೀಪಾವಳಿಯಂದು ಮನೆಗೆ ನೆಂಟರು ಆಗಮಿಸಿ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಮಕ್ಕಳು ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಾರೆ. ಸಣ್ಣ ಮಕ್ಕಳೊಂದಿಗೆ ದೊಡ್ಡವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ದೀಪಾವಳಿ ಹಬ್ಬದಲ್ಲಿ ಮನೆಗಳು, ಅಂಗಡಿಗಳು, ಕಚೇರಿಗಳು, ಮಠಗಳು ಮತ್ತು ಮಂದಿರಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ, ದೀಪಾಲಂಕಾರ ಮಾಡಿ ಲಕ್ಷ್ಮಿ, ಸರಸ್ವತಿ, ಕುಬೇರನನ್ನು ಪೂಜೆಸುತ್ತಾರೆ.
ದೀಪಾವಳಿಯು ಕೇವಲ ಬೆಳಕಿನ ಹಬ್ಬವಲ್ಲ. ಇದು ಸಂತೋಷ, ಸದ್ಭಾವನೆ ಮತ್ತು ಆಧ್ಯಾತ್ಮಿಕ ಜಾಗೃತಿಯ ಹಬ್ಬವಾಗಿದೆ. ಇದು ನಮ್ಮನ್ನು ಒಳಗಿರುವ ಬೆಳಕನ್ನು ಅಳವಡಿಸಿಕೊಳ್ಳಲು ಮತ್ತು ಕತ್ತಲೆಯೊಂದಿಗೆ ಹೆಚ್ಚಾಗಿ ಹಿಡಿಯುವ ಜಗತ್ತಿನಲ್ಲಿ ಸಕಾರಾತ್ಮಕತೆ ಮತ್ತು ದಯೆಯನ್ನು ಹರಡಲು ಪ್ರೋತ್ಸಾಹಿಸುತ್ತದೆ. ನಾವು ನಮ್ಮ ದೀಪಗಳನ್ನು ಬೆಳಗಿಸುತ್ತಿದ್ದಂತೆ ನಮ್ಮೊಳಗೆ ಜ್ಞಾನ ಮತ್ತು ಸಹಾನುಭೂತಿಯ ಬೆಳಕನ್ನು ಬೆಳಗಿಸಬೇಕಿದೆ.