ನವದೆಹಲಿ: ಭಾರತದ ಯುವ ಕುಸ್ತಿ ಪಟು ದೀಪಕ್ ಪುನಿಯಾ ಅವರು ಬೆಳ್ಳಿ ಗೆಲ್ಲುವ ಮೂಲಕ ಕಾಲು ನೋವಿನ ಸಮಸ್ಯೆಯಿಂದ ವಿಶ್ವ ಚಾಂಪಿಯನ್ ಕುಸ್ತಿ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ.
ಸೆಮಿಫೈನಲ್ ಪಂದ್ಯದ ವೇಳೆ ಎಡಗಾಲು ಪಾದಕ್ಕೆ ಗಾಯವಾದ ಕಾರಣ ಅವರು, 86 ಕೆ.ಜಿ ವಿಭಾಗದಲ್ಲಿ ಇರಾನಿನ ಶ್ರೇಷ್ಠ ಕುಸ್ತಿ ಪಟು ಹಜ್ಸನ್ ಯಾಜ್ದಾನಿ ಅವರ ವಿರುದ್ಧ ಆಡಬೇಕಾದ ವಿಶ್ವ ಚಾಂಪಿಯನ್ ಶಿಪ್‍ನ ಫೈನಲ್ ಆಟವಾನ್ನು ಆಡುವುದಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ದೀಪಕ್ ಪುನಿಯಾ ಅವರು, ಸೆಮಿಫೈನಲ್ ಪಂದ್ಯದ ವೇಳೆ ನನ್ನ ಎಡಗಾಲಿಗೆ ಗಾಯವಾಗಿದೆ. ಎಡಗಾಲು ಭಾರವನ್ನು ತಡೆಯುತ್ತಿಲ್ಲ. ಈ ಸ್ಥಿತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ತುಂಬಾ ಕಷ್ಟ. ಈ ಪಂದ್ಯ ಶ್ರೇಷ್ಠ ಆಟಗಾರ ಯಾಜ್ದಾನಿ ವಿರುದ್ಧ ಆಟವಾಡಲು ಒಳ್ಳೆಯ ಅವಕಾಶವಿತ್ತು. ಆದರೆ ನನಗೆ ಆಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಶನಿವಾರ ಸ್ವಿಜರ್ಲ್ಯಾಂಡ್ ನ ಸ್ಟೀಫನ್ ರೀಚ್‍ಮುತ್ ಅವರ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ ದೀಪಕ್ ಅವರ ಎಡಗಾಲಿಗೆ ಪೆಟ್ಟಾಗಿತ್ತು. ಇದಕ್ಕೂ ಮುನ್ನ ದೀಪಕ್ ಪುನಿಯಾ ಅವರು ಕೊಲಂಬಿಯಾದ ಕಾರ್ಲೋಸ್ ಮೆಂಡೆಜ್ ಮತ್ತು ಖಜಕಿಸ್ತಾನದ ಅಡಿಲೆಡ್ ದಾವ್ಲುಂಬಾಯೆವ್ ವಿರುದ್ಧ ಗೆದ್ದು ಫೈನಲ್ ಪ್ರವೇಶ ಮಾಡಿದ್ದರು. ಆದರೆ ಫೈನಲ್ ಸಮಯದಲ್ಲಿ ಗಾಯವಾದ ಕಾರಣ ಅವರಿಗೆ ಫೈನಲ್ ಆಡಲು ಆಗಾದೆ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೀಪಕ್ ಪುನಿಯಾ ಈ ಬಾರಿಯೂ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದ ಚಿನ್ನದ ಪದಕ ಕೈತಪ್ಪಿದೆ. 2010 ರಲ್ಲಿ ಮಾಸ್ಕೋದಲ್ಲಿ ನಡೆದ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ 66 ಕೆ.ಜಿ ವಿಭಾಗದಲ್ಲಿ ಭಾರತದ ಸುಶೀಲ್ ಕುಮಾರ್ ಅವರು ಚಿನ್ನ ಗೆದ್ದಿದ್ದರು.
ಈ ಬಾರಿಯ ಕುಸ್ತಿ ವಿಶ್ವ ಚಾಂಪಿಯನ್‍ಶಿಪ್ ಭಾರತದ ರಾಹುಲ್ ಅವೇರ್ ಅವರು 61 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಇಂದು ಹೋರಾಡಲಿದ್ದಾರೆ.