ಮುಂಬೈ: ಗಾಯಾಳುವಾಗಿ ಎನ್‍ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಟೀಂ ಇಂಡಿಯಾದ ವೇಗಿ ದೀಪಕ್ ಚಹರ್ ಮತ್ತೆ ಗಾಯಗೊಂಡು ನಾಲ್ಕು ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾದ ಸಂಕಷ್ಟ ಎದುರಾಗಿದೆ.
ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳೆ ದೀಪಕ್ ಚಹರ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಚಹರ್ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ಕೊನೆಗೆ ಫಿಟ್ ಆಗಿ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಚಹರ್ ಮತ್ತೆ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದ್ದು ಮುಂದಿನ 4 ತಿಂಗಳು ಕ್ರಿಕೆಟ್‍ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ
ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಹರ್‌ರನ್ನು 14 ಕೋಟಿ ರೂ. ನೀಡಿ ಖರೀದಿಸಿತ್ತು. ಆ ಬಳಿಕ ಗಾಯಗೊಂಡು ಮೊದಲ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಚಹರ್ ಏಪ್ರಿಲ್‍ನಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸ್ ತಿಳಿಸಿತ್ತು. ಆದರೆ ಇದೀಗ ಚಹರ್ ಮತ್ತೆ ಗಾಯಗೊಂಡಿರುವುದರಿಂದ ಪೂರ್ತಿ ಐಪಿಎಲ್‍ನಿಂದ ಹೊರಗುಳಿಯಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳಲು 4 ತಿಂಗಳು ಬೇಕಾಗಿರುವುದರಿಂದ 2022ರ ಅಕ್ಟೋಬರ್, ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲೂ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: RCB ಕಪ್ ಗೆಲ್ಲುವ ವರೆಗೆ ಮದುವೆ ಆಗಲ್ಲ – ಅಭಿಮಾನಿಯ ಪೋಸ್ಟರ್ ವೈರಲ್
ಚಹರ್ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ನೆರವಾಗುತ್ತಿದ್ದರು ಹಾಗಾಗಿ ಐಪಿಎಲ್‍ನಲ್ಲಿ ಚೆನ್ನೈ ತಂಡ ಚಹರ್ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು ಆದರೆ ಪೂರ್ತಿ ಐಪಿಎಲ್‍ನಿಂದ ಚಹರ್ ಹೊರಗುಳಿದಿರುವುದರಿಂದ ಚೆನ್ನೈ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇತ್ತ ಟೀಂ ಇಂಡಿಯಾದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಚಹರ್ ಟಿ20 ವಿಶ್ವಕಪ್‍ನಿಂದ ಹೊರಗುಳಿದರೆ ತಂಡಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ.