ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಹು ಸಮಯದಿಂದ ತಂಡದಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿರುವ ಧೋನಿ ರೀ ಎಂಟ್ರಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಿರಿಯ ಕ್ರಿಕೆಟ್ ಆಟಗಾರರು ಸೇರಿದಂತೆ ಕ್ರಿಕೆಟ್ ವಿಶ್ಲೇಷಕರು ಧೋನಿ ಕಮ್‍ಬ್ಯಾಕ್ ಕುರಿತು ತಮ್ಮದೇ ಅಭಿಪ್ರಾಯ ತಿಳಿಸಿದ್ದಾರೆ. ಸದ್ಯ ಟೀ ಇಂಡಿಯಾ ಯುವ ವೇಗಿ ದೀಪಕ್ ಚಹಾರ್ ಕೂಡ ಧೋನಿ ರೀ ಎಂಟ್ರಿ ಕುರಿತು ಕುತೂಹಲದ ಹೇಳಿಕೆಯನ್ನು ನೀಡಿದ್ದಾರೆ.
ಲಾಕ್‍ಡೌನ್ ಕಾರಣದಿಂದ ಮನೆಯಲ್ಲಿ ಉಳಿದಿರುವ ಚಹರ್ ಇನ್‍ಸ್ಟಾದಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. 2020ರ ಐಪಿಎಲ್ ಟೂರ್ನಿ ನಡೆದು, ಅದರಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ತಂಡಕ್ಕೆ ಕಮ್‍ಬ್ಯಾಕ್ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕಳೆದ ಎರಡು ವರ್ಷಗಳ ಹಿಂದೆ ಧೋನಿ ನಾಯಕತ್ವದ ಏಷ್ಯಾಕಪ್ ಟೂರ್ನಿಯಲ್ಲಿ ಚಹಾರ್ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ಆದಾಗಲೇ ಧೋನಿ ನಿವೃತ್ತಿ ಘೋಷಿಸಿದ್ದರು ಆ ವೇಳೆ ನಡೆದ ಬೆಳೆವಣಿಗೆಗಳ ಕಾರಣದಿಂದ ತಂಡದ ನಾಯಕತ್ವವನ್ನು ಮತ್ತೆ ವಹಿಸಿಕೊಂಡಿದ್ದರು. ವಿಶೇಷ ಎಂಬಂತೆ ಆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದು ನನ್ನ ಅದೃಷ್ಠ ಎಂದು ಚಹಾರ್ ಹೇಳಿದ್ದಾರೆ. ಅಲ್ಲದೇ ಧೋನಿ ಟೀಂ ಇಂಡಿಯಾ ಪರ ಆಡುವ ಅಂತಿಮ ಪಂದ್ಯದ ತಂಡದಲ್ಲಿ ನಾನು ಇರಬೇಕು ಎಂದು ಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
Advertisement
ಧೋನಿ ಅವರ ಫಿಟ್ನೆಸ್ ಲೆವೆಲ್ ಸಹ ಅತ್ಯುತ್ತಮವಾಗಿದೆ. ಈಗಲೂ ಅವರು ತಂಡದ ಪರ ಆಡುವ ಸಾಮಥ್ರ್ಯವನ್ನು ಹೊಂದಿದ್ದಾರೆ ಎಂದು ಚಹರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಚಹರ್ ಐಪಿಎಲ್‍ನಲ್ಲಿ ಚೆನ್ನೈ ಪರ ವೇಗದ ಬೌಲರ್ ಆಗಿ ಆಗಮನ ಸೆಳೆದಿದ್ದರು. ಧೋನಿ ನಾಯಕತ್ವದ ಸಿಎಸ್‍ಕೆ ತಂಡದ ಪ್ರಮುಖ ಆಟಗಾರ ಸ್ಥಾನವನ್ನು ಚಹರ್ ಪಡೆದಿದ್ದಾರೆ.
Advertisement