ನವದೆಹಲಿ: ರಸ್ತೆ ಅಪಘಾತದಲ್ಲಿ ಪ್ರಾಣ ಬಿಟ್ಟ ಪಂಜಾಬ್ ನಟ ದೀಪ್ ಸಿಧು, ಗೆಳತಿ ರೀನಾ ರೈ ಜೊತೆಗೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಟ್ ಮಾಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಕೃಷಿ ಹೋರಾಟದಲ್ಲಿ ಕೆಂಪುಕೋಟೆ ಮೇಲೆ ಸೀಖ್ ಭಾವುಟ ಹಾರಿಸಿದ್ದ ದೀಪ್ ಸಿಧು ಫೆಬ್ರವರಿ 15 ರಂದು ನಿಧನರಾದರು. ದೆಹಲಿ ಬಳಿ ನಡೆದ ರಸ್ತೆ ಅಪಘಾತವೇ ಸಾವನ್ನಪ್ಪಿದ್ದು, ಆತನೊಂದಿಗೆ ಕಾರಿನಲ್ಲಿದ್ದ ಗೆಳತಿ ರೀನಾ ರೈ ಏರ್‌ಬ್ಯಾಗ್‌ನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ, ಫೆಬ್ರವರಿ 14 ರಂದು ರೀನಾ ಹಂಚಿಕೊಂಡ ಅವರ ಪ್ರೇಮಿಗಳ ದಿನದ ಸೆಲೆಬ್ರೆಷನ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!
View this post on Instagram
ಇಡೀ ಜಗತ್ತು ವಿರುದ್ಧವಾಗಿದ್ದಾಗ ನೀವು ನಿಂತಿದ್ದೀರಿ, ನನ್ನನ್ನು ರಕ್ಷಿಸಿದ್ದೀರಿ, ನನ್ನ ಗೌರವವನ್ನು ಹಿಡಿದಿದ್ದೀರಿ, ನನಗೆ ಶಕ್ತಿಯನ್ನು ನೀಡಿದ್ದೀರಿ, ನನ್ನ ಕಾರಣ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾರ್ಥಿಸಿದ್ದೀರಿ ಆದರೆ ಅದು ನಿಜವಾಗಿಯೂ ನನ್ನ ಹೃದಯ ಮತ್ತು ಆತ್ಮವನ್ನು ಮುಟ್ಟಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲವು ಯಾವುದೇ ವಿವರಣೆಯನ್ನು ಮೀರಿದೆ. ನಾನು ಪ್ರೀತಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.