ವಾಷಿಂಗ್ಟನ್: ಅಮೆರಿಕ ಚುನಾವಣೆಗೆ (USA Election) ದಿನಗಣನೆ ಆರಂಭವಾಗುತ್ತಿದ್ದಂತೆ ಕಮಲಾ ಹ್ಯಾರಿಸ್‌ಗೆ (Kamala Harris) ಅನಿವಾಸಿ ಭಾರತೀಯರು (NRI) ಶಾಕ್ ನೀಡುವ ಸಾಧ್ಯತೆ ಹೆಚ್ಚಿದೆ.
ಹೌದು. ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಡೆಮಾಕ್ರಟಿಕ್ (Democratic) ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅನಿವಾಸಿ ಭಾರತೀಯರ ಒಲವು ರಿಪಬ್ಲಿಕನ್ (Republican) ಪಕ್ಷದ ಕಡೆಗೆ ವಾಲಿದೆ. ಹೀಗಿದ್ದರೂ ಒಟ್ಟಾರೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್‌ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ.
Advertisement
ಭಾರತೀಯ ಅಮೆರಿಕರನ್ನು ಗುರಿಯಾಗಿಸಿ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್’ ಸಂಸ್ಥೆ ನಡೆಸಿದ ಅನ್‌ಲೈನ್ ಸಮೀಕ್ಷೆಯಲ್ಲಿ 61%ರಷ್ಟು ಮಂದಿ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ನೀಡಿದರೆ 32% ಜನರು ರಿಪಬ್ಲಿಕನ್ ಪಕ್ಷದ ಪರ ಒಲವು ತೋರಿದ್ದಾರೆ.
Advertisement
Advertisement
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಕಡೆಗೆ ಭಾರತೀಯರು ಚಲಾಯಿಸಿದ್ದ ಮತಗಳನ್ನು ಲೆಕ್ಕ ಹಾಕಿದಾಗ ಈ ಬಾರಿ ಕಮಲಾ ಹ್ಯಾರಿಸ್ ಪಕ್ಷದ ಪರ ಒಲವು ಸ್ವಲ್ಪ ಇಳಿದಿದ್ದು, ಟ್ರಂಪ್ (Donald Trump) ಪರ ಹೆಚ್ಚು ಮತಗಳು ಬೀಳಬಹುದು ಎಂದು ಸಮೀಕ್ಷೆ ತಿಳಿಸಿದೆ.
Advertisement
ಸೆಪ್ಟೆಂಬರ್ 18ರಿಂದ ಅಕ್ಟೋಬರ್ 15ರ ನಡುವೆ 714 ಅನಿವಾಸಿ ಭಾರತೀಯರು ಆನ್‌ಲೈನ್ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.
ಅಮೆರಿಕದಲ್ಲಿ ಭಾರತ ಮೂಲದ 52 ಲಕ್ಷ ಜನ ವಾಸವಾಗಿದ್ದು, ಈ ಪೈಕಿ 39 ಲಕ್ಷ ಜನರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಅನಿವಾಸಿ ಭಾರತೀಯರು ಅಮೆರಿಕದಲ್ಲಿ ನೆಲೆಸಿರುವ ಎರಡನೇ ಅತಿ ದೊಡ್ಡ ವಲಸಿಗರ ಗುಂಪಿಗೆ ಸೇರಿದ್ದಾರೆ.
ನವೆಂಬರ್ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 96% ರಷ್ಟು ಅನಿವಾಸಿ ಭಾರತೀಯರು ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.