ಕೇರಳಕ್ಕೆ ಅನುದಾನ ಬೇಕಿದ್ರೆ ʻ ಹಿಂದುಳಿದ ರಾಜ್ಯʼ ಎಂದು ಘೋಷಿಸಲಿ: ಜಾರ್ಜ್‌ ಕುರಿಯನ್‌

Public TV
2 Min Read
George Kurian

ತಿರುವನಂತಪುರಂ: ಕೇರಳಕ್ಕೆ (Kerala) ಹೆಚ್ಚಿನ ಅನುದಾನ ಬೇಕಿದ್ದರೆ ಹಿಂದುಳಿದ ರಾಜ್ಯವೆಂದು ಘೋಷಿಸಲಿ ಎಂದು ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ (George Kurian) ಹೇಳಿದ್ದಾರೆ.

2022ರ ಬಜೆಟ್‌ನಲ್ಲಿ (Budget 2025) ಕೇಂದ್ರ ಸರ್ಕಾರ ಕೇರಳ ರಾಜ್ಯವನ್ನು ಕಡೆಗಣಿಸಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕುರಿಯನ್‌, ಕೇರಳ ರಾಜ್ಯವು ಕೇಂದ್ರದಿಂದ ಹೆಚ್ಚಿನ ಅನುದಾನ ಬಯಸಿದ್ರೆ, ಹಿಂದುಳಿದ ರಾಜ್ಯ ಎಂದು ಘೋಸಿಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ವರ `ಚೋಲಿ ಕೆ ಪೀಚೆ ಕ್ಯಾ ಹೈ’ ಡ್ಯಾನ್ಸ್ ಮಾಡಿದ್ದಕ್ಕೆ ಮದ್ವೆ ನಿಲ್ಲಿಸಿದ ವಧುವಿನ ತಂದೆ

Union budget niramala sitharaman

ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ ಬಿದ್ದ ರಾಜ್ಯಗಳಿಗೆ ಕೇಂದ್ರವು ವಿಶೇಷ ಹಣಕಾಸಿನ ಪ್ಯಾಕೇಜ್‌ಗಳನ್ನ ಹಂಚುತ್ತದೆ. ಹಾಗಾಗಿ ನೀವು ಕೇರಳ ಹಿಂದುಳಿದಿದೆ. ರಸ್ತೆಗಳು ಸರಿಯಿಲ್ಲ, ಉತ್ತಮ ಶಿಕ್ಷಣವಿಲ್ಲ, ಮೌಲ ಸೌಕರ್ಯಗಳಲ್ಲಿ ಹಿಂದುಳಿದಿದೆ ಎಂದು ನೀವು ಘೋಷಿಸಿದ್ರೆ, ಹಣಕಾಸು ಆಯೋಗ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಹೆಚ್ಚಿನ ಅನುದಾನ ಸಿಗಲಿದೆ ಎಂದು ಹೇಳಿದ್ದಾರೆ.

ಸಚಿವರ ಈ ಹೇಳಿಕೆ ತೀವ್ರ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯು ಕೇರಳ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ರಾಜ್ಯದ ಆಡಳಿತ ಪಕ್ಷದ ನಾಯಕರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪಟ್ಟಾ ಜಮೀನು ಹೊಂದಿರುವವರ ಅರಣ್ಯ ಹಕ್ಕು ಅರ್ಜಿ ಪರಿಶೀಲನೆಗೆ ಈಶ್ವರ್ ಖಂಡ್ರೆ ಸೂಚನೆ

Wayanad Landslides

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ 8ನೇ ಬಜೆಟ್‌ ಭಾಷಣ ಮಂಡಿಸಿದ ಬಳಿಕ ಕೇರಳ ಸಿಎಂ ಇದು ನಿರಾಶಾದಾಯಕ ಬಜೆಟ್‌. ಕಳೆದ ಜುಲೈನಲ್ಲಿ ಭೂಕುಸಿತ ಸಂಭವಿಸಿದ ವಯನಾಡನ್ನು ಮತ್ತೆ ನಿರ್ಮಿಸಲು ಅನುದಾನಕ್ಕೆ ಮನವಿ ಮಾಡಿದ್ದೆವು. ಆದ್ರೆ ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಕಡೆಗಣಿಸಿದೆ ಎಂದು ಅಸಮಾಧಾನ ಹೊರಹಾಕಿದ್ದರು.

ವಯನಾಡ್‌ ಭೂಕುಸಿತಕ್ಕೆ ಸಂಬಂಧಿಸಿದಂತೆ ಅನುದಾನ ಹಾಗೂ 24,000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ ಸಹ ನೀಡುವಂತೆ ಕೋರಿದ್ದೆವು. ವಿಝಿಂಜಂ ಬಂದರಿನ ರಾಷ್ಟ್ರೀಯ ಪ್ರಾಮುಖ್ಯತೆ ಪರಿಗಣಿಸಿ, ಅದಕ್ಕೂ ಬೆಂಬಲವನ್ನು ಕೋರಿದ್ದೆವು. ಇದ್ಯಾವುದನ್ನು ಸರ್ಕಾರ ಪರಿಗಣಿಸಿಲ್ಲ. ಕೇರಳ ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ಮುಂದಿದೆ. ಆದ್ರೆ ಕೆಲವು ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಆ ಕ್ಷೇತ್ರಗಳ ಉನ್ನತೀಕರಣಕ್ಕಾಗಿ ಅನುದಾನ ಕೇಳಿದರೂ ಕಡೆಗಣಿಸಲಾಗಿದೆ ಎಂದು ಅಕ್ಷೇಪಿಸಿದ್ದರು.

Share This Article