ಹುಬ್ಬಳ್ಳಿ: ಹಿಂದೂ ಕಾರ್ಯಕರ್ತರ (Hindu Activists) ರಕ್ಷಣೆ ವಿಚಾರದಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರದ (BJP State Government) ವಿರುದ್ಧ ಹಿಂದೂ ಯುವಕರ (Hindhu Youth) ಆಕ್ರೋಶ ಮುಂದುವರಿದಿದೆ. ಇದಕ್ಕೆ ಗಣೇಶ ವಿಸರ್ಜನೆ ಮೆರಣಿಗೆಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಗಣೇಶಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹಿಂದೂ ಯುವಕರು ಘೋಷಣೆ ಕೂಗಿರುವ ವಿಡಿಯೋ (Video) ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆಗೆ ಕಸಾಪ ಮುಂದಾಗಿಲ್ಲ: ಮಹೇಶ್ ಜೋಶಿ ಸ್ಪಷ್ಟನೆ
Advertisement
Advertisement
ಹುಬ್ಬಳ್ಳಿಯಲ್ಲಿ ನಡೆದ 11 ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಯುವಕರು ಘೋಷಣೆ ಕೂಗಿರುವ ವೀಡಿಯೋ ವೈರಲ್ ಆಗಿದ್ದು, `ಬಿಜೆಪಿ 40 ಪರ್ಸೆಂಟ್ ಕಮಿಷನ್ ಸರ್ಕಾರ, ಗಲ್ಲಿಗಲ್ಲಿ ಮೇ ಚೋರ್ ಹೈ, ಬಿಜೆಪಿ ಚೋರ್ ಹೈ’ ಎಂಬ ಘೋಷಣೆಯನ್ನು ನೂರಾರು ಯುವಕರು ಮೆರವಣಿಗೆಯಲ್ಲಿ ಕೂಗಿದ್ದಾರೆ. ಇದನ್ನೂ ಓದಿ: ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು
Advertisement
Advertisement
ಈಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವಾರು ಜನ ವಿಡಿಯೋ ಎಲ್ಲೆಡೆ ಶೆರ್ ಮಾಡುತ್ತಿದ್ದಾರೆ.