ಬೆಂಗಳೂರು: ಸರ್ಕಾರಿ ಕೆಲಸಗಳಿಗೆ (Government Work) ಇನ್ನುಮುಂದೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್, ವಿಮಾನ ಸೇವೆ (Helicopter/Flight Service) ಪಡೆಯಲು ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರಿ ಕೆಲಸಗಳಿಗೆ ಹೆಲಿಕಾಪ್ಟರ್, ವಿಮಾನ ಗುತ್ತಿಗೆ ಪಡೆಯುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲು ನಿರ್ಧಾರ ಮಾಡಲಾಗಿದೆ. ಇಷ್ಟು ದಿನ ಗಂಟೆಗಳ ಅವಧಿಯಲ್ಲಿ ಹೆಲಿಕಾಪ್ಟರ್/ವಿಶೇಷ ವಿಮಾನ ಗುತ್ತಿಗೆ ಪಡೆಯಲಾಗುತ್ತಿತ್ತು. ಇನ್ನು ಮುಂದೆ ಗಂಟೆಗಳ ಆಧಾರದಲ್ಲಿ ಬಾಡಿಗೆ ಪಡೆಯದೇ ಇರಲು ನಿರ್ಧಾರ ಮಾಡಲಾಗಿದೆ. ಗಂಟೆಗಳ ಬದಲಾಗಿ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್/ವಿಮಾನ ಸೇವೆ ಪಡೆಯಲು ನಿರ್ಧಾರ ಮಾಡಲಾಗಿದೆ. ವಾರ್ಷಿಕ ಗುತ್ತಿಗೆಗೆ ಸೂಕ್ತ ತರಬೇತಿ ಹೊಂದಿರುವ ಸಂಸ್ಥೆಗಳಿಗೆ ಟೆಂಡರ್ ಆಹ್ವಾನ ಮಾಡಲು ನಿರ್ಧಾರ ಮಾಡಲಾಗಿದೆ. ಆಸಕ್ತಿಯುಳ್ಳ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗಿಯಾಗಿಯಲು ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ – ಪ್ರಿಯಾಂಕ್ ಖರ್ಗೆ
ಗಂಟೆಗಳ ಆಧಾರದಲ್ಲಿ ಸರ್ಕಾರದ ಬೊಕ್ಕಸದಿಂದ 28 ಕೋಟಿ ಖರ್ಚಾಗುತ್ತಿತ್ತು. ಆದರೆ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್ ಸೇವೆ ಲಭ್ಯವಿರುತ್ತಿರಲಿಲ್ಲ. ಈಗ ವಾರ್ಷಿಕ ಗುತ್ತಿಗೆಯಿಂದ ಸಮಯಕ್ಕೆ ಸರಿಯಾಗಿ ಸೇವೆ ಸಿಗಲಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರದಿಂದ ವಾರ್ಷಿಕ ಗುತ್ತಿಗೆಗೆ ನಿರ್ಧಾರ ಮಾಡಲಾಗಿದೆ ಅಂತ ಹೇಳಲಾಗ್ತಿದೆ. ಇದನ್ನೂ ಓದಿ: ಯಾವ ಕ್ಷಣದಲ್ಲಾದ್ರೂ ಸೂಪಾ ಡ್ಯಾಮ್‌ನಿಂದ ನೀರು ಬಿಡುಗಡೆ – ಪ್ರವಾಹದ ಬಗ್ಗೆ ಕೆಪಿಟಿಸಿಎಲ್‌ನಿಂದ ಅಂತಿಮ ಎಚ್ಚರಿಕೆ