ಬೆಂಗಳೂರು: ಜಾತಿಗಣತಿ ವರದಿ ಬಂದ ಬಳಿಕ ಜಾರಿ ಮಾಡಬೇಕಾ? ಬೇಡವಾ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ತೀರ್ಮಾನ ಮಾಡ್ತಾರೆ ಅಂತ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಸ್ಪಷ್ಟಪಡಿಸಿದ್ದಾರೆ.
ಜಾತಿಗಣತಿ ವರದಿ ಜಾರಿ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈಗಾಗಲೇ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರ ಜನವರಿವರೆಗೆ ವಿಸ್ತರಣೆ ಮಾಡಲಾಗಿದೆ. ಅವರು ಮೊದಲು ಜಾತಿಗಣತಿ ವರದಿ (Caste Census Report) ಕೊಡಲಿ ಆಮೇಲೆ ಬಿಡುಗಡೆ ಮಾಡಬೇಕಾ, ಬೇಡ್ವಾ? ಅನ್ನೋದನ್ನ ಚರ್ಚೆ ಮಾಡ್ತೀವಿ. ನಾನು, ಸಿಎಂ ಯಾರು ಕೂಡಾ ವರದಿ ನೋಡಿಲ್ಲ. ವರದಿ ಇಲ್ಲದೇ ಚರ್ಚೆ ಮಾಡೋದು ಸರಿಯಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: Telangana Election 2023: ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಸ್ಟಾರ್ಸ್
Advertisement
Advertisement
ವರದಿ ಸ್ವೀಕಾರ ಮಾಡಬಾರದು ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಹಿ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿ ನೋಡದೇ ಸ್ವೀಕಾರ ಮಾಡಬೇಕು-ಬೇಡ ಅನ್ನೋದು ಸರಿಯಲ್ಲ. ಗಣತಿ ಕುರಿತು ಸಾಕಷ್ಟು ವರದಿಗಳು ಬಂದಿವೆ. ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಜಾರಿ ಮಾಡಬೇಕಾ ಅನ್ನೋದು ನಿರ್ಧಾರವಾಗುತ್ತದೆ. ನೂರಾರು ಕೋಟಿ ಹಣ ಖರ್ಚು ಮಾಡಿ ವರದಿ ಸ್ವಿಕಾರ ಮಾಡದೇ ಹೋದ್ರೆ ತಪ್ಪಾಗುತ್ತದೆ. ಅದಾದ ಬಳಿಕ ಸಾಧಕ-ಬಾಧಕ ನೋಡ್ತೀವಿ. ನನ್ನ ಬಳಿಯೂ ಒಕ್ಕಲಿಗ ಸಂಘದವರು ಬಂದಿದ್ದರು. ನೀವು ವರದಿ ನೋಡಿದ್ರಾ ಅಂತ ಕೇಳಿದೆ. ಅವರು ಇಲ್ಲ ಅಂತ ಹೇಳಿದ್ರು. ಆದ್ದರಿಂದ ವರದಿ ಬಿಡುಗಡೆಯಾದ ಬಳಿಕ ಮಾತನಾಡಿ ಅಂತ ನಾನೇ ಅವರಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ವರದಿ ವಿರೋಧಿಸಿ ಶಾಮನೂರು ಶಿವಶಂಕರಪ್ಪ ಸಹಿ ಸಂಗ್ರಹ ವಿಚಾರ ಕುರಿತು ಮಾತನಾಡಿ, ಶಾಮನೂರು ಅವರು ಸಹಿ ಸಂಗ್ರಹ ಮಾಡಲಿ. ಅವರು ಹಿರಿಯರು ಸಿಎಂ, ಹೈಕಮಾಂಡ್ ಅವರ ಬಳಿ ಮಾತಾಡ್ತಾರೆ. ಮೊದಲು ವರದಿ ಬರಲಿ. ಕ್ಯಾಬಿನೆಟ್ ನಲ್ಲಿ ಇಡ್ತೀವಿ. ಬಳಿಕ ಎಲ್ಲಿ ಮಂಡನೆ ಮಾಡ್ತೀವಿ ಅಂತ ಸಿಎಂ ನಿರ್ಧಾರ ಮಾಡ್ತಾರೆ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಎಲ್ಲರೂ ಆರೋಗ್ಯವಾಗಿದ್ದಾರೆ, ಬೇಗ ಮನೆಗೆ ಕಳಿಸಿಕೊಡ್ತೀವಿ: ಕಾರ್ಮಿಕರ ಬಗ್ಗೆ ವೈದ್ಯರ ಮಾತು