ಬೆಂಗಳೂರು: ಪ್ರವಾಸ, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬಿಎಂಟಿಸಿ ಬಸ್‍ಗಳನ್ನು ಬಾಡಿಗೆಗೆ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಸಾಂದರ್ಭಿಕ ಒಪ್ಪಂದದ ಆಧಾರದ ಮೇರೆಗೆ ವಿವಿಧ ಮಾದರಿಗಳ ಬಸ್ಸುಗಳನ್ನು ಪರಿಚಯಿಸಿ ಉತ್ತಮ ದರಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಾಡಿಗೆಗೆ ನೀಡಲು ನಿರ್ಧರಿಸಲಾಗಿದೆ. ಬಿಎಂಟಿಸಿಯ ವಿವಿಧ ಮಾದರಿಯ ಬಸ್‍ಗಳ ದರಗಳ ಪಟ್ಟಿ ಈ ಕೆಳಗಿದೆ.
ಸಾಮಾನ್ಯ ಬಸ್, 40 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 50 ರೂ.ನಂತೆ 7,500 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀ, ಪ್ರತಿ ಕಿ.ಮೀ ದರ 48 ರೂ.ನಂತೆ 9,600 ರೂ. ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ
Advertisement
Advertisement
24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀ, ಪ್ರತಿ ಕಿ.ಮೀ ದರ 44 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ, ಪ್ರತಿ ಕಿ.ಮೀಗೆ ದರ 44 ರೂ.ನಂತೆ 13,200 ರೂ. ಗೊತ್ತುಪಡಿಸಲಾಗಿದೆ.
Advertisement
Advertisement
ಮಿನಿ ಬಸ್, 31 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ ಪ್ರತಿ ಕಿ.ಮೀಗೆ 47 ರೂ.ನಂತೆ 7,050 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ (ಕನಿಷ್ಠ 200 ಕಿ.ಮೀಗೆ) ಪ್ರತಿ ಕಿ.ಮೀಗೆ 45 ರೂ.ನಂತೆ 9,000 ರೂ. ನಿಗದಿಪಡಿಸಲಾಗಿದೆ.
*24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ, ಪ್ರತಿ ಕಿ.ಮೀ ದರ 42 ರೂಪಾಯಿಯಂತೆ 10,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ ಪ್ರತಿ ಕಿ.ಮೀ 42 ರೂ.ನಂತೆ 12,600 ರೂ. ನಿಗದಿ ಮಾಡಲಾಗಿದೆ.
ಬಿ.ಎಸ್- 6 ಬಸ್ 41 ಆಸನಗಳಿಗೆ 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 60 ರೂ.ನಂತೆ 9,000 ರೂ. ಹಾಗೂ 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀಗೆ ಪ್ರತಿ ಕಿ.ಮೀಗೆ 55 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ.
24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ ಪ್ರತಿ ಕಿ.ಮೀಗೆ 50 ರೂ.ನಂತೆ 12,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀಗೆ ಪ್ರತಿ ಕಿ.ಮೀ ದರ 50 ರೂ.ನಂತೆ 15,000 ರೂ. ಗೊತ್ತುಪಡಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬೆಂಗಳೂರಿನಿಂದ ಅಳಿಲು ಸೇವೆ!