ನವದೆಹಲಿ: ಮುಂದಿನ 2 ಅಥವಾ 3 ದಿನಗಳ ಕಾಲ ರಾಷ್ಟ್ರ ರಾಜಧಾನಿಯ ಮಾಲಿನ್ಯ (Pollution) ಪರಿಸ್ಥಿತಿಯನ್ನು ಗಮನಿಸಲಾಗುವುದು. ಆ ಬಳಿಕ ಸಮ-ಬೆಸ ಜಾರಿ ಮಾಡುವುದು ಅಥವಾ ಕೃತಕ ಮಳೆ (Artificial Rain) ಸುರಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ (Gopal Rai) ಬುಧವಾರ ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೀಪಾವಳಿಯಿಂದ ದೆಹಲಿಯ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ವಿಭಾಗದಲ್ಲಿದೆ. ಮುಂದಿನ 2-3 ದಿನಗಳ ತಾಪಮಾನ ಮತ್ತು ಗಾಳಿಯ ವೇಗವನ್ನು ಪರಿಶೀಲಿಸಲಾಗುವುದು. ಪರಿಸ್ಥಿತಿ ಉತ್ತಮಗೊಳ್ಳುವ ನಿರೀಕ್ಷೆಯಿದೆ ಎಂದರು. ಇದನ್ನೂ ಓದಿ: ಓವರ್‌ಟೇಕ್ ಭರದಲ್ಲಿ ಕಂದಕಕ್ಕೆ ಬಿದ್ದ ಬಸ್ – 38 ಮಂದಿ ಸಾವು
Advertisement
Advertisement
ಒಂದು ವೇಳೆ ಪರಿಸ್ಥಿತಿ ಸುಧಾರಿಸದ್ದಿದ್ದರೇ ನಾವು ಕ್ರಮಗಳ ಬಗ್ಗೆ ವಿಜ್ಞಾನಿಗಳ ಜೊತೆಗೆ ನಾವು ಮೇಲ್ವಿಚಾರಣೆ ಮಾಡುತ್ತೇವೆ. ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟರೇ ಮಾತ್ರ ಬೆಸ-ಸಮದಂತಹ ಕಠಿಣ ಕ್ರಮಗಳ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ತಮಿಳುನಾಡಿನ 9 ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ – ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Advertisement
ಮಳೆಯಿಂದಾಗಿ ದೀಪಾವಳಿಗೂ ಮುನ್ನ ಉಸಿರುಗಟ್ಟಿಸುವ ಮಾಲಿನ್ಯದಿಂದ ಮುಕ್ತಿ ಸಿಕ್ಕಿತ್ತು. ಆದರೆ ದೀಪಾವಳಿ ಬಳಿಕ ಮತ್ತೆ ತೀವ್ರ ಕಳಪೆ ಮಟ್ಟದಲ್ಲಿ ಗಾಳಿಯ ಗುಣಮಟ್ಟ ದಾಖಲಾಗಿದೆ. ನವೆಂಬರ್ 13 ರಿಂದ ಬೆಸ-ಸಮ ನಿಯಮವನ್ನು ಜಾರಿಗೆ ತರಬೇಕಿತ್ತು. ಆದರೆ ನೋಂದಣಿ ಸಂಖ್ಯೆಗಳು ಕೊನೆಗೊಳ್ಳುವ ಕಾರುಗಳಂತೆ ರಸ್ತೆಯಲ್ಲಿರುವ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬೆಸ-ಸಮ ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನೆಗಳನ್ನು ಎತ್ತಿದಾಗ ಅದನ್ನು ತಡೆಹಿಡಿಯಲಾಯಿತು. ಇದನ್ನೂ ಓದಿ: 1 ಬಾರಿ ಬೀದಿ ನಾಯಿ ಕಚ್ಚಿದ್ರೆ ಕನಿಷ್ಟ 10 ಸಾವಿರ ಪರಿಹಾರ ಕೊಡಬೇಕು: ಹೈಕೋರ್ಟ್
Advertisement
ಈ ಹಿಂದೆ ನವೆಂಬರ್ 20ರ ಮೊದಲು ಮೋಡ ಬಿತ್ತನೆ ತಂತ್ರಜ್ಞಾನದ ಮೂಲಕ ನಗರದಲ್ಲಿ ಕೃತಕ ಮಳೆ ಮಾಡಲು ದೆಹಲಿ ಸರ್ಕಾರ ಯೋಜಿಸಿತ್ತು. ಐಐಟಿ-ಕಾನ್ಪುರ ತಂಡದೊಂದಿಗೆ ಸಭೆ ನಡೆಸಲಾಗಿತ್ತು. ಆದರೆ ಇದಕ್ಕೆ ಕೇಂದ್ರದಿಂದ ಸಮ್ಮತಿ ಬರಬೇಕಿದೆ. ಕೃತಕ ಮಳೆಯ ಸಂಪೂರ್ಣ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ ಎಂದು ಮೊದಲೇ ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಮೋದಿ ವಿರುದ್ಧ ಹೇಳಿಕೆ – ಪ್ರಿಯಾಂಕಾ ಗಾಂಧಿ, ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್