ಮುಂಬೈ: ಸಾಲಬಾಧೆಯಿಂದ ಕಂಗೆಟ್ಟ ರೈತನೊಬ್ಬ ಚಿತೆಯನ್ನು ಸಿದ್ಧಪಡಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಂದೇಡ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತುರಟಿ ಗ್ರಾಮದ ಪೊತನ್ನ ರಮಲು ಬೋಲ್ಪಿಲ್ವಾಡ್ (65) ಆತ್ಮಹತ್ಯೆಗೆ ಶರಣಾದ ರೈತ. ಪೊತನ್ನ ಬೆಳೆ ಬೆಳೆಯಲು ಬ್ಯಾಂಕುಗಳಿಂದ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದರು. ಆದರೆ ಬೆಳೆ ನಷ್ಟವಾಗಿದ್ದರಿಂದ ಬ್ಯಾಂಕುಗಳ ಸಾಲವನ್ನು ತೀರಿಸಲಾಗದೇ, ಮನನೊಂದು ಕಳೆದ ಶುಕ್ರವಾರ ಉಮ್ರಿ ಸಮೀಪದ ತನ್ನ ಜಮೀನಿನಲ್ಲಿ ಸ್ವತಃ ತಾವೇ ಕಟ್ಟಿಗೆಗಳಿಂದ ಚಿತೆಯನ್ನು ತಯಾರುಮಾಡಿ, ಬೆಂಕಿ ಹಚ್ಚಿ ಅದರಲ್ಲಿ ಹಾರಿ ಪ್ರಾಣ ಬಿಟ್ಟಿದ್ದಾರೆ.
ಜಮೀನಿಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದ ಪೊತನ್ನ ತಡರಾತ್ರಿಯಾದರೂ ಮನೆಗೆ ವಾಪಾಸ್ಸಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಶನಿವಾರ ಬೆಳಗ್ಗೆ ಅವರನ್ನು ಹುಡುಕುತ್ತಾ ಜಮೀನಿಗೆ ಬಂದಾಗ, ಪೋತನ್ನ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಮಾಹಿತಿಗಳ ಪ್ರಕಾರ ಮೃತ ಪೊತನ್ನ, ರಾಜ್ಯ ಸರ್ಕಾರದ ಸಾಲಮನ್ನಾದ ಯೋಜನೆಗಾಗಿ ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಸಾಲಮನ್ನಾದ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಬಂದಿರಲಿಲ್ಲ. ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಉಮ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews