ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವ್ಯಕ್ತಿಯೊಬ್ಬ ಸಾಲ ತೀರಿಸುವ ಸಲುವಾಗಿ ತನ್ನ ಪತ್ನಿ ಹಾಗೂ ಮಕ್ಕಳನ್ನು 5 ಲಕ್ಷಕ್ಕೆ ಮಾರಿದ ಅಚ್ಚರಿಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ನಂದ್ಯಾಳ್ ನಗರದ ನಿವಾಸಿ 35 ವರ್ಷದ ವೆಂಕಟಮ್ಮ ಅವರು ಕೊಯಿಲಕುಂಟ್ಲಾ ನಿವಾಸಿ 30 ವರ್ಷದ ಪಸುಪೊಲ್ಟಿ ಮಡ್ಡಿಲೆಟಿ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ 4 ಹೆಣ್ಣು ಹಾಗೂ ಓರ್ವ ಪುತ್ರನಿದ್ದಾನೆ. ಮಡ್ಡಿಲೆಟಿ ಜೂಜಾಟ ಹಾಗೂ ಮದ್ಯವ್ಯಸನಿಯಾಗಿದ್ದನು.
Advertisement
ಅತಿಯಾಗಿ ಸಾಲ ಮಾಡಿಕೊಂಡಿದ್ದ ಮಡ್ಡಿಲೆಟಿ, ವಯಸ್ಸಿಗೆ ಬಂದ ತನ್ನ ಮಗಳನ್ನು ಮಾರಾಟ ಮಾಡಲು ಯೋಜನೆ ಹಾಕಿದ್ದನು. ಅಂತೆಯೇ ಕಳೆದ ವರ್ಷವೇ 1.5 ಲಕ್ಷಕ್ಕೆ ಸಂಬಂಧಿಯೊಬ್ಬರ ಮಗನಿಗೆ ಕೊಡುವುದಾಗಿ ಪ್ಲಾನ್ ಮಾಡಿದ್ದನು. ಆದ್ರೆ ಆ ಸಮಯದಲ್ಲಿ ಆಕೆಗೆ ಮದುವೆ ವಯಸ್ಸು ಆಗಿರಲಿಲ್ಲ. ಹೀಗಾಗಿ ಮದುವೆಯ ವಯಸ್ಸು ಬಂದಾಗ ಕೊಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದನು. ಆ ಹಣ ಖರ್ಚಾದ ಬಳಿಕ ಆತ ಹಣ ಪಡೆಯುವ ಸುಲಭ ಉಪಾಯಗಳನ್ನು ಹುಡುಕುತ್ತಿದ್ದನು. ಉಳಿದ ಹೆಣ್ಣು ಮಕ್ಕಳಿಗೆ ಇದೀಗ 10, 8 ಮತ್ತು 6 ಆದ್ರೆ ಮಗನಿಗೆ 4 ವರ್ಷ ವಯಸ್ಸು.
Advertisement
Advertisement
ಇದೇ ವೇಳೆ ಈತನ ಸಹೋದರ ಬುಸ್ಸಿ, ಪತ್ನಿ ಹಾಗೂ ಉಳಿದ ಹೆಣ್ಣು ಮಕ್ಕಳು ಹಾಗೂ ಪುತ್ರನನ್ನು 5 ಲಕ್ಷಕ್ಕೆ ಮಾರಟ ಮಾಡುವಂತೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಮಾತುಕತೆ ನಡೆಸಿ ಡೀಲ್ ಮಾಡಿಕೊಂಡಿದ್ದು, ಪೇಪರ್‍ಗೆ ಸಹಿ ಮಾಡುವಂತೆ ಪತ್ನಿಗೆ ಮಡ್ಡಿಲೆಟ್ ಹೇಳಿದ್ದಾನೆ. ಈ ವೇಳೆ ಪತ್ನಿ ಸಹಿ ಹಾಕಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಮಡ್ಡಿಲೆಟ್ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ, ನಾನು ಈತನೊಂದಿಗೆ ಜೀವನ ನಡೆಸಲ್ಲ ಅಂತ ಹೇಳಿ ತವರು ಮನೆಗೆ ತೆರಳಿದ್ದರು.
Advertisement
ಈ ವೇಳೆ ಆಕೆಯ ಪೋಷಕರು ಮೆಡಿಲೆಟ್ ವಿರುದ್ಧ ನಂದ್ಯಾಳ್ ತಾಲೂಕ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡುವುದಾಗಿ ದೂರು ನೀಡಿದ್ದಾರೆ. ಈ ವೇಳೆ ಪತ್ನಿ ಮಕ್ಕಳ ಮಾರಾಟ ಮಾಡಲು ತಯಾರಿ ನಡೆಸಿರುವ ಪ್ಲಾನ್ ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಾರಾಟ ಮಾಡಿದ ಕುರಿತು ದೂರೊಂದು ಬಂದಿತ್ತು. ಆದ್ರೆ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರಾಕರಿಸಿದ್ದೇವೆ. ಯಾಕಂದ್ರೆ ಮೆಡ್ಡಿಲೆಟ್ ಬುಡಗ ಜಂಗಲು ಸಮುದಾಯಕ್ಕೆ ಸೇರಿದವನಾಗಿದ್ದು, ಅಲ್ಲಿ ಪತ್ನಿಯರ ಖರೀದಿ ಸಾಮಾನ್ಯ ಅಂತ ಸುಮ್ಮನಾದ್ವಿ. ಆದ್ರೆ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಮೇಶ್ ಬಾಬು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬುಡಗ ಜಂಗಲು ಸಮುದಾಯದಲ್ಲಿ ಪತಿಯೊಬ್ಬ ಮೊದಲು ತನ್ನ ಪತ್ನಿಯನ್ನು ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆತ ಯಾರಿಗೂ ಗೊತ್ತಾಗದಂತೆ ತನ್ನ ಕುಟುಂಬವನ್ನೇ ಮಾರಾಟ ಮಾಡಲು ತಯಾರಿ ನಡೆಸಿರುವುದು ತಿಳಿದುಬಂತು ಎಂದು ಐಸಿಡಿಎಸ್(Integrated Child Development Services)ಯ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಮಕ್ಕಳನ್ನು ರಕ್ಷಿಸಲಾಗಿದೆ ಅಂತ ಅವರು ಹೇಳಿದ್ದಾರೆ.