ನವದೆಹಲಿ: ಎಸ್‌ಐಆರ್ (SIR) ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ, ದೇಶದ್ಯಾಂತ ಹಲವು ರಾಜ್ಯಗಳಲ್ಲಿ ನಡೆಸುತ್ತಿರುವ ಎಸ್‌ಐಆರ್ ಕೂಡಲೇ ನಿಲ್ಲಿಸಬೇಕು, ಚುನಾವಣಾ ಆಯೋಗದ ಅಧಿಕಾರಿಗಳ ನೇಮಕ ಸಮಿತಿಯಲ್ಲಿ ಸಿಜೆಐ, ರಾಜ್ಯಸಭೆ ವಿಪಕ್ಷ ನಾಯಕ ಸೇರ್ಪಡೆಯಾಗಬೇಕು, ಚುನಾವಣಾ ಸಮಯದಲ್ಲಿ ಖಾತೆಗಳಿಗೆ ಹಣ ಹಾಕುವ ವ್ಯವಸ್ಥೆ ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ (Manish Tewari) ಆಗ್ರಹಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ (Loksabha) ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ನಿಷ್ಪಕ್ಷಪಾತ ಚುನಾವಣೆ ನಡೆಸಲು ಆಯೋಗವನ್ನು ರಚಿಸಲಾಯಿತು. ಆದರೆ ಇಂದು ಆಯೋಗದ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎತ್ತುವ ಪರಿಸ್ಥಿತಿ ಬಂದಿದೆ. ಪ್ರಜಾಪ್ರಭುತ್ವ ಭರವಸೆ ಮೇಲೆ ನಡೆಯುತ್ತದೆ. ಮತದಾನ ಮಾಡುವ ಜನರಿಗೆ ಸರಿಯಾದ ವ್ಯಕ್ತಿಗೆ ತಮ್ಮ ಮತ ತಲುಪಿದಿಯೇ ಎಂದು ಸ್ಪಷ್ಟವಾಗಬೇಕು. ಆದರೆ ಈಗ ಇವಿಎಂ ಕೂಡಾ ಹ್ಯಾಕ್ ಆಗಬಹುದು ಎಂದು ಸಾಬೀತಾಗಿದೆ ಎಂದರು.ಇದನ್ನೂ ಓದಿ: ನಾಯಕರು ಶಾಂತಿ ಮಂತ್ರ ಪಠಿಸುವಾಗ ನೀವ್ಯಾಕೆ ಮಾತಾಡ್ತೀರಿ? – ಬೇಳೂರು ಕಿಡಿ
ಇವಿಎಂ ಸೋರ್ಸ್ ಕೋಡ್ ಮಿಷನ್ ತಯಾರಿಸುವ ಕಂಪನಿ ಅಥವಾ ಆಯೋಗ ಯಾರ ಬಳಿ ಇದೆ. ನಾನು ಕೇಳಿದ ಪ್ರಶ್ನೆಗೆ ಈವರೆಗೂ ಸರ್ಕಾರ ಉತ್ತರ ನೀಡಿಲ್ಲ. ಅನುಮಾನ ಬಗೆಹರಿಸಲು ೧೦೦% ವಿವಿಪ್ಯಾಟ್ ಎಣಿಕೆಯಾಗಬೇಕು. ಇಲ್ಲದಿದ್ದರೆ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಬೇಕು ಮುಂದುವರಿದ ದೇಶಗಳು ಬ್ಯಾಲೆಟ್ ಪೇಪರ್‌ಗೆ ಏಕೆ ಮರಳಿವೆ? ಮಷಿನ್ ಹ್ಯಾಕ್ ಆಗಬಹುದು ಎನ್ನುವ ಅನುಮಾನ ಅವರಿಗೂ ಇದೆ. ಬ್ಯಾಲೆಟ್ ಪೇಪರ್ ಎಣಿಕೆಗೆ ವಿಳಂಬ ಆದರೂ ಪರವಾಗಿಲ್ಲ. ಕನಿಷ್ಠ ಜನರ ನಂಬಿಕೆ ಗಟ್ಟಿಯಾಗಿರುತ್ತೆ ಎಂದು ಹೇಳಿದರು.
ಅಖಿಲೇಶ್ ಯಾದವ್ ಮಾತನಾಡಿ, ರಾಂಪುರ ಬೈ ಎಲೆಕ್ಷನ್‌ನಲ್ಲಿ ನಮಗೆ ಮತಗಳವು ಅರಿವಿಗೆ ಬಂದಿದೆ, ಮತದಾನದ ದಿನ ಪೊಲೀಸರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದರು, ಎಸ್ಪಿ ಮತದಾರರು ಮನೆಯಿಂದ ಹೊರಗೆ ಬಾರದ ಹಾಗೇ ಮಾಡಿದರು. ಸಾಕ್ಷ್ಯಧಾರಗಳ ಜೊತೆಗೆ ಆಯೋಗಕ್ಕೆ ದೂರು ನೀಡಿದರು, ಆದರೂ ಕ್ರಮ ತೆಗೆದುಕೊಂಡಿಲ್ಲ. ಚುನಾವಣೆಯಲ್ಲಿ ಒಮ್ಮೆ ಅವರು ಇವರು ಗೆಲ್ಲುವುದು ಸಾಮಾನ್ಯ. ಆದರೆ ಆಯೋಗ ನಿಪ್ಷಪಾತವಾಗಿರಬೇಕು.
ಮಿಲ್ಕಿಪುರ ಉಪಚುನಾವಣೆಯಲ್ಲೂ ಅಕ್ರಮ ನಡೆದಿದೆ. ಕಾಂಗ್ರೆಸ್ ನೀಡಿದ ಮೂರು ಬದಲಾವಣೆಗಳು ಆಗಬೇಕು. ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ಆಗಬೇಕು, ಇವಿಎಂ ಮೇಲೆ ಸಾಕಷ್ಟು ಪ್ರಶ್ನೆಗಳಿವೆ. ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳು ಇವಿಎಂ ಕೈಬಿಡಲಾಗಿದೆ. ಭಾರತದಲ್ಲಿ ನಾವು ಯಾಕೆ ಬ್ಯಾಲೆಟ್ ಪೇಪರ್‌ಗೆ ಮರಳಬಾರದು ಎಂದು ಪ್ರಶ್ನಿಸಿದರು.
ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಮಾತನಾಡಿ, ಮನೀಶ್ ತಿವಾರಿ ಚುನಾವಣಾ ಮುನ್ನ ಹತ್ತು ಸಾವಿರ ಖಾತೆಗೆ ವರ್ಗಾವಣೆ ಮಾಡಿದರ ಬಗ್ಗೆ ಮಾತನಾಡಿದರು. ಇದು ನಿಲ್ಲಿಸುವ ಮೊದಲು ಅವೈಜ್ಞಾನಿಕ ಘೋಷಣೆಗಳನ್ನು ನಿಲ್ಲಿಸಬೇಕು. ಬಿಹಾರದಲ್ಲಿ ಪ್ರತಿ ಮನೆಗೂ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದರು, ಇದಕ್ಕೂ ಮೊದಲು ನ್ಯಾಯ ಯೋಜನೆಯ ಬಗ್ಗೆ ಮಾತನಾಡಿದರು ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರು.
ಮತದಾರರು ಯಾರು ವೋಟ್ ಚೋರಿ ಬಗ್ಗೆ ಮಾತನಾಡುತ್ತಿಲ್ಲ, ಅವರಿಗೆ ಮತಗಳ್ಳತನ ಆಗುತ್ತೆ ಎಂದು ಗೊತ್ತಿಇಲ್ಲ, ಕಾಂಗ್ರೆಸ್ ದೇಶದಲ್ಲಿ ಮೊದಲು ಬೂತ್ ಕ್ಯಾಪ್ಚರ್ ಮಾಡಿದ್ದು, ರಾಜೀವ್ ಗಾಂಧಿ ಹತ್ಯೆಯಾದಾಗ ದೇಶದಲ್ಲೇ ಚುನಾವಣೆ ಮುಂದೂಡಲಾಯಿತು. ತುರ್ತು ಪರಿಸ್ಥಿತಿ ಹೇರಿ ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸಿತು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.ಇದನ್ನೂ ಓದಿ: ಯಾವ ವಿಮಾನಯಾನ ಸಂಸ್ಥೆಯೂ ಕಾನೂನಿಗಿಂತ ದೊಡ್ಡದಲ್ಲ: ರಾಮ್‌ಮೋಹನ್ ನಾಯ್ಡು

