– ದೋಷಿಗಳ ಪರ ವಕೀಲರು ಹೇಳಿದ್ದೇನು?
– ಕಾನೂನಿನ ಅವಕಾಶಗಳಿವೆಯಾ?
ನವದೆಹಲಿ: 2012ರ ನಿರ್ಭಯಾ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ದೋಷಿಗಳಿಗೆ ಸೋಮವಾರ ಮೂರನೇ ಬಾರಿ ಡೆತ್ ವಾರೆಂಟ್ ಜಾರಿ ಮಾಡಲಾಗಿದೆ. ದೋಷಿಗಳು ಕಾನೂನಿನಲ್ಲಿರುವ ಸಣ್ಣ ಸಣ್ಣ ಅವಕಾಶಗಳನ್ನು ಬಳಸಿಕೊಂಡು ಸಾವಿನ ದವಡೆಯಿಂದ ಬಜಾವ್ ಆಗುತ್ತಿದ್ದಾರೆ. ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ದೋಷಿಗಳಿಗೆ ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಆದೇಶ ನೀಡಿದೆ. ಆದೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೋಷಿಗಳ ಪರ ವಕೀಲ, ನಮ್ಮ ಮುಂದೆ ಇನ್ನು ಕಾನೂನಿನ ಅವಕಾಶಗಳಿವೆ ಎಂಬ ಹೇಳಿಕೆ ಹಲವು ಅನುಮಾನಗಳಿಗೆ ಕಾರಣ ಆಗಿದೆ.
Advertisement
ದೋಷಿಗಳಾದ ಮುಖೇಶ್, ವಿನಯ್ ಮತ್ತು ಅಕ್ಷಯ್ ಮೂವರಿಗೆ ಗಲ್ಲು ಶಿಕ್ಷೆಯಿಂದ ಪಾರಾಗಲು ಯಾವುದೇ ಅವಕಾಶಗಳಿಲ್ಲ. ಮೂವರ ಕ್ಷಮಾದಾನ ಅರ್ಜಿಯಿಂದ ಹಿಡಿದು ಪರಿಶೀಲನೆವರೆಗಿನ ಎಲ್ಲ ಕಾನೂನು ಪ್ರಕ್ರಿಯೆ ಅಂತ್ಯಗೊಂಡಿವೆ. ಕೇವಲ ಪವನ್ ಮುಂದೆ ಕೆಲ ಕಾನೂನಿನ ಅವಕಾಶಗಳಿವೆ. ಕ್ಷಮಾದಾನ ಅರ್ಜಿಯ ಪರಿಶೀಲನೆಯನ್ನು ಈಗಾಗಲೇ ವಜಾಗೊಳಿಸಲಾಗಿದೆ. ಆದ್ರೆ ಕ್ಯೂರೆಟಿವ್ ಅರ್ಜಿ ಸಲ್ಲಿಸಬಹುದು. ಇದುವರೆಗೂ ಪವನ್ ಕ್ಯೂರೆಟಿವ್ ಅರ್ಜಿ ಸಲ್ಲಿಸಿಲ್ಲ.
Advertisement
Advertisement
ಮತ್ತೊಮ್ಮೆ ಕ್ಷಮದಾನ ಅರ್ಜಿ ಸಲ್ಲಿಸಬಹುದಾ?
ನಾಲ್ವರು ದೋಷಿಗಳ ಕ್ಷಮಾದಾನದ ಅರ್ಜಿ ತಿರಸ್ಕøತಗೊಂಡಿದೆ. ಗಲ್ಲು ಶಿಕ್ಷೆ ಪದೇ ಪದೇ ಮುಂದೂಡುತ್ತ ಬರುತ್ತಿದೆ. ಅಪರಾಧಿಗಳು ಸಹ ಕಾನೂನುಗಳ ಅವಕಾಶಗಳನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೀಗ ದೋಷಿಗಳ ಪರ ವಕೀಲರು ಮತ್ತೊಮ್ಮೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿ ದೋಷಿಗಳ ಪೋಷಕರ ಮೂಲಕ ಕ್ಷಮಾದಾನ ಅರ್ಜಿ ಸಲ್ಲಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದ್ರೆ, ಇನ್ನು ಹೆಚ್ಚಿನ ದಾಖಲಾತಿಗಳನ್ನು ಹೊಂದಿಸಿ ಕ್ಷಮೆ ಕೇಳಬಹುದು. ಇಲ್ಲಿ ಅಪರಾಧಿಗಳ ಪೋಷಕರಿಗೆ ವಯಸ್ಸಾಗಿದೆ ಎಂಬ ಅಂಶಗಳನ್ನು ಉಲ್ಲೇಖಿಸುವ ಸಾಧ್ಯತೆಗಳಿವೆ.
Advertisement
ನಿರ್ಭಯಾ ಪರ ವಕೀಲೆ ಹೇಳಿದ್ದೇನು?
ಯಾವುದೇ ಕಾರಣಕ್ಕೂ ಗಲ್ಲು ಶಿಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ. ನ್ಯಾಯಾಲಯ ಮುಂದಿನ ಏಳು ದಿನಗಳಲ್ಲಿ ದೋಷಿಗಳು ಕಾನೂನು ಹೋರಾಟ ನಡೆಸಬಹುದು ಎಂದು ಕೋರ್ಟ್ ಹೇಳಿದೆ. ಮಾರ್ಚ್ 3ರಂದು ನಾಲ್ವರಿಗೂ ಗಲ್ಲು ಆಗಲಿದೆ ಎಂದು ನಿರ್ಭಯಾ ಪರ ವಕೀಲೆ ಸೀಮಾ ಕುಶವಾಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾನೂನು ಅವಕಾಶಗಳು:
ನಮ್ಮ ಮುಂದೆ ಕಾನೂನು ಅವಕಾಶಗಳಿವೆ. ಘಟನೆ ನಡೆದಾಗ ಪವನ್, ಅಪ್ರಾಪ್ತನಾಗಿದ್ದ ಸಂಬಂಧಿಸಿದ್ದಕ್ಕೆ ಕ್ಯೂರೆಟಿವ್ ಅರ್ಜಿ ಬಾಕಿ ಇದೆ. ಪವನ್ ಎಸ್‍ಎಲ್‍ಪಿ ಮೇಲಿನ ಕ್ಯೂರೆಟಿವ್ ಅರ್ಜಿ ನಿರ್ಧಾರವಾಗಿಲ್ಲ. ಒಂದು ವೇಳೆ ಇಲ್ಲಿ ಪರಿಹಾರ ಸಿಗದಿದ್ದರೆ ಕ್ಷಮದಾನದ ಅರ್ಜಿ ಸಲ್ಲಿಸುತ್ತೇವೆ. ಇನ್ನು ನಮ್ಮ ಮುಂದೆ ಕಾನೂನು ಅವಕಾಶಗಳಿದ್ದು, ಎಲ್ಲವನ್ನು ಬಳಸಿಕೊಳ್ಳಲಿದ್ದೇವೆ ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಹೇಳುತ್ತಾರೆ.
ಫೆಬ್ರವರಿ 5ರಂದು ದೆಹಲಿ ಹೈಕೋರ್ಟ್ ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳಿಗೆ ಫೆಬ್ರವರಿ 11ರೊಳಗೆ ನಿಮ್ಮ ಕಾನೂನು ಹೋರಾಟವನ್ನು ಪೂರ್ಣಗೊಳಿಸಬೇಕೆಂದು ಸಮಯವಕಾಶ ನೀಡಿತ್ತು. ಆದ್ರೆ ದೋಷಿ ಪವನ್ ಕೆಳ ನ್ಯಾಯಾಲಯದಲ್ಲಿ ನನ್ನ ಪರವಾಗಿ ಯಾವ ವಕೀಲರು ಇಲ್ಲ. ಹಾಗಾಗಿ ಕ್ಯೂರೆಟಿವ್ ಪಿಟಿಶನ್ ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದನು. ಹಾಗಾಗಿ ಕೆಳ ನ್ಯಾಯಾಲಯ ದೋಷಿ ಪವನ್ ಗಾಗಿ ವಕೀಲರೊಬ್ಬರನ್ನು ನೇಮಿಸಿತ್ತು.