ಮುಂಬೈನಲ್ಲಿ ಕಟ್ಟಡ ಕುಸಿತ – 17ಕ್ಕೆ ಏರಿದ ಸಾವಿನ ಸಂಖ್ಯೆ

Public TV
1 Min Read
Kurla building collapse 1

ಮುಂಬೈ: ಸೋಮವಾರ ತಡರಾತ್ರಿ ಮುಂಬೈನ ಹೃದಯ ಭಾಗದಲ್ಲಿರುವ ಕುರ್ಲಾದಲ್ಲಿ 4 ಅಂತಸ್ತಿನ ಕಟ್ಟಡ ಕುಸಿತವಾಗಿತ್ತು. ಅವಶೇಷಗಳಡಿ ಸಿಲುಕಿ ಇಲ್ಲಿಯವರೆಗೆ 17 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಮಾಹಿತಿ ನೀಡಿದೆ.

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ಘಟಿಸಿರುವ ಭಾರೀ ದುರಂತಕ್ಕೆ ಶಿವಸೇನೆಯ ಬಂಡಾಯ ಶಾಸಕ ಮಂಗೇಶ್ ಕುಡಾಲ್ಕರ್ ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಕೇಸ್ ಏರಿಕೆ – ಅಪಾರ್ಟ್ಮೆಂಟ್, ಕಚೇರಿ, ವಿದ್ಯಾಸಂಸ್ಥೆಗಳಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ

Kurla building collapse

ಈ ಘಟನೆ ನಾಯಕ್ ನಗರ ಪ್ರದೇಶದಲ್ಲಿ ನಡೆದಿದ್ದು, ಕಟ್ಟಡಕ್ಕೆ ಈ ಹಿಂದೆಯೇ ಮುಂಬೈ ಪಾಲಿಕೆ ನೋಟಿಸ್ ಕೊಟ್ಟಿತ್ತು. ಆದರೆ ಕಟ್ಟಡವನ್ನು ತೆರವುಗೊಳಿಸಿರಲಿಲ್ಲ. ಆದರೆ ಇದೀಗ ಅಪಾಯದ ಅಂಚಿನಲ್ಲಿದ್ದ ಕಟ್ಟಡ ತೆರವುಗೊಳಿಸದ ತಪ್ಪಿಗೆ ತಾನೇ ನೆಲಸಮವಾಗಿದ್ದು, 17 ಜನರ ಪ್ರಾಣವನ್ನೂ ತೆಗೆದಿದೆ.

ಈ ಬಗ್ಗೆ ಶಿವಸೇನೆ ಶಾಸಕ ಸಂಜಯ್ ಪೋಟ್ನಿಸ್, 2016ರಲ್ಲಿ ಕಟ್ಟಡವನ್ನು ಎ1 ವರ್ಗದಲ್ಲಿ ಪಟ್ಟಿ ಮಾಡಲಾಗಿತ್ತು. ಆಡಿಟ್ ಬಳಿಕ ಅದನ್ನು ಎ2 ಅಡಿಯಲ್ಲಿ ಮರು ವರ್ಗೀಕರಿಸಲಾಗಿತ್ತು. ಅದನ್ನು ದುರಸ್ತಿ ಮಾಡಬೇಕಾಗಿತ್ತು. ಆದರೆ ಅದು ಆಗಿರಲಿಲ್ಲ. ಇದರಲ್ಲಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ನಿರ್ಲಕ್ಷ್ಯ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೈತ

Mumbai Building Collapses

ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಆದಿತ್ಯ ಠಾಕ್ರೆ, ಬಿಎಂಸಿ ಸೂಚನೆಯಿದ್ದಲ್ಲಿ ನಿರ್ಲಕ್ಷಿಸದೇ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿ ಒತ್ತಿ ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *