ಬೆಂಗಳೂರು: ಹಿಂದೂ ಧರ್ಮದ (Hindu Religion) ಬಗ್ಗೆ ಅವಹೇಳನ ಮಾಡಿದ್ದಕ್ಕೆ ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು. ಈ ಕಾರಣಕ್ಕೆ ನಾನು ಪತ್ರ ಬರೆಯುತ್ತಿದ್ದೆ ಎಂದು ಆರೋಪಿ ಶಿವಾಜಿರಾವ್ ಜಾಧವ್ (Shivaji Rao Jadhav) ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಸಾಹಿತಿಗಳಿಗೆ ಬೆದಿಕೆ ಹಾಕಿದ ಪ್ರಕಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸಿಸಿಬಿ ಪೊಲೀಸರು (CCB Police) ಶಿವಾಜಿ ರಾವ್‌ನನ್ನು ಬಂಧಿಸಿದ್ದು, ಕೋರ್ಟ್ 13 ದಿನ ಪೊಲೀಸ್ ಕಸ್ಟಡಿಗೆ (Police Custody) ನೀಡಿದೆ. ಪೊಲೀಸರ ವಿಚಾರಣೆ ಸಮಯದಲ್ಲಿ ಹಲವು ವಿಷಯಗಳನ್ನು ತಿಳಿಸಿದ್ದಾನೆ ಎಂದು ಸಿಸಿಬಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಹಿಂದುತ್ವದ ಮೇಲೆ ಆತನಿಗೆ ಒಲವಿತ್ತು, ಪತ್ರದಲ್ಲಿ ಮನವಿ ಮಾಡಿರಬಹುದು – ಆರೋಪಿ ಶಿವಾಜಿರಾವ್ ಜಾಧವ್ ಸಹೋದರ
ಏನು ಬಾಯಿಬಿಟ್ಟಿದ್ದಾನೆ?
ಸಾಹಿತಿಗಳ ಬಾಯಿ ಮುಚ್ಚಿಸಲು ನನಗೆ ಬೇರೆ ಯಾವುದೇ ದಾರಿಯೂ ಸಿಕ್ಕಿರಲಿಲ್ಲ. ಪತ್ರ ಬರೆದು ಬೆದರಿಕೆ ಹಾಕುವುದು ಒಂದೇ ನನ್ನ ಮುಂದಿದ್ದ ದಾರಿಯಾಗಿತ್ತು. ನಾನು ಪತ್ರ ಬರೆದ ಬಳಿಕ ಎಲ್ಲರೂ ಸುಮ್ಮನಿರುತ್ತಿದ್ದರು. ಹಿಂದೂ ಧರ್ಮದ ಬಗ್ಗೆ ವಿರೋಧವಾಗಿ ಮಾತನಾಡುವುದನ್ನು ನಿಲ್ಲಿಸುತ್ತಿದ್ದರು. 2008 ರಲ್ಲಿಯೇ ಇದು ನನಗೆ ಮನವರಿಕೆಯಾಗಿತ್ತು. ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್
2008 ರಲ್ಲಿ ಯು ಆರ್ ಅನಂತಮೂರ್ತಿ, ಭಗವಾನ್ ಅವರಿಗೆ ಪತ್ರ ಬರೆದು ಬೆದರಿಸಿದ್ದೆ. ಪತ್ರದ ಬಳಿಕ ಇವರು ಸುಮ್ಮನಾಗಿದ್ದರು. ಇತ್ತಿಚೀನ ದಿನಗಳಲ್ಲಿ ಈ ಸಾಹಿತಿಗಳದ್ದು ಹೆಚ್ಚಾಗಿತ್ತು. ಅದಕ್ಕೆ ಅವರಿಗೆ ಪತ್ರ ಬರೆದು ಹೆದರಿಸಿದ್ದೆ. ನನಗೆ ಶಕ್ತಿ ಇದ್ದಿದ್ದರೆ ಮತ್ತೊಂದು ಗೌರಿ ಲಂಕೇಶ್ ಹತ್ಯೆಯ ರೀತಿ ಆಗುತ್ತಿತ್ತು. ನಾನು ಪತ್ರ ಬರೆದ ಬಳಿಕ ಅವರು ವಿರೋಧವಾಗಿ ಮಾತನಾಡುವುದನ್ನು ನಿಲ್ಲಿಸಿದ್ದರು. ಈ ಕಾರಣಕ್ಕೆ ನಾನು ಪತ್ರ ಬರೆಯುತ್ತಿದ್ದೆ ಎಂದು ಹೇಳಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.
Web Stories