ಸೋಫಿಯಾ: ಗರ್ಭಿಣಿ ಹಸುವಿಗೆ ವಿಧಿಸಿದ್ದ ಮರಣದಂಡನೆ ಆದೇಶವನ್ನು ಬಲ್ಗೇರಿಯಾ ಸರ್ಕಾರ ಅನೂರ್ಜಿತಗೊಳಿಸಿದ ಘಟನೆ ನಡೆದಿದೆ.
ಪೆಂಕಾ ಎಂಬ ಹಸು ಕಳೆದ ತಿಂಗಳು ತನ್ನ ಹಿಂಡಿನ ಜೊತೆ ಸಾಗುವಾಗ ಯುರೋಪಿಯನ್ ಯೂನಿಯನ್ ಗಡಿಯನ್ನು ದಾಟಿ ಪಕ್ಕದ ಸರ್ಬಿಯಾಕ್ಕೆ ಹೋಗಿ ವಾಪಸ್ ಬಂದಿತ್ತು.
Advertisement
ಯುರೋಪಿಯನ್ ಕಮಿಷನ್ ಮಾರ್ಗದರ್ಶನಗಳ ಪ್ರಕಾರ ಹಸುಗಳ ಆರೋಗ್ಯ ಸ್ಥಿತಿಯ ದಾಖಲೆಗಳನ್ನು ಗಡಿಯಲ್ಲಿರುವ ಚೆಕ್ ಪಾಯಿಂಟ್ ಗಳಲ್ಲಿ ತೋರಿಸಬೇಕು. ಗಡಿಯಲ್ಲಿ ತಪಾಸಣೆಗೊಂಡು ಅನುಮತಿ ಪಡೆದ ನಂತರವಷ್ಟೇ ಯುರೋಪ್ ಯೂನಿಯನ್ ಒಳಗೆ ಬರಬಹುದಾಗಿದೆ. ಹಾಗಾಗಿ ಅಧಿಕಾರಿಗಳು ಪೆಂಕಾವನ್ನು ಶಿಕ್ಷೆಗೆ ಗುರಿಪಡಿಸಿ ಎಂದು ವಾದಿಸಿದ್ದರು. ಸರ್ಕಾರ ಪೆಂಕಾಗೆ ಮರಣದಂಡನೆಯನ್ನು ವಿಧಿಸಿತ್ತು.
Advertisement
ವಿಚಾರ ತಿಳಿಯುತ್ತಿದ್ದಂತೆ ಪ್ರಾಣಿದಯಾ ಚಳುವಳಿಗಾರರಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಪ್ರಕರಣದಲ್ಲಿ ಪೆಂಕಾಗೆ ವಿನಾಯಿತಿ ನೀಡುವಂತೆ ಸರ್ಕಾರವನ್ನು ಕೋರಿ ಆನ್ ಲೈನ್ ಅಭಿಯಾನ ಕೂಡ ಶುರುವಾಗಿತ್ತು. ಇದರ ಬೆನ್ನಲ್ಲೇ ಬಲ್ಗೇರಿಯಾ ಸರ್ಕಾರ ಆದೇಶವನ್ನು ಅನೂರ್ಜಿತಗೊಳಿಸಿದೆ.
Advertisement
https://www.youtube.com/watch?v=DBzExVlwhQQ