– ತಲಾ 50,000 ರೂ. ಆರ್ಥಿಕ ಸಹಾಯ
ಕೋಲಾರ: ಮುರುಡೇಶ್ವರದ (Murudeshwara) ಕಡಲ ತೀರದಲ್ಲಿ ವಿದ್ಯಾರ್ಥಿನಿಯರು (Students) ನೀರಿನಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆ ಮೃತ ವಿದ್ಯಾರ್ಥಿನಿಯರ ಮನೆಗೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ (Samruddi V Manjunath) ಭೇಟಿ ನೀಡಿ ಸಾಂತ್ವನ ಹೇಳಿದರು.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ಬಳಿಯ ಮುರುಡೇಶ್ವರ ಸಮುದ್ರದಲ್ಲಿ ಇತ್ತೀಚಿಗೆ ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ನಾಲ್ಕು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು. ವಿದ್ಯಾರ್ಥಿಗಳು ಮೃತಪಟ್ಟ ಸುದ್ದಿ ಕೇಳಿ ಪೋಷಕರಿಗೆ ಟಿ.ಟಿ ವಾಹನದ ವ್ಯವಸ್ಥೆ ಮಾಡಿ ಪೋಷಕರನ್ನು ಮುರಡೇಶ್ವರಕ್ಕೆ ಕಳುಹಿಸಿಕೊಟ್ಟಿದ್ದ ಶಾಸಕ ಸ್ವತಃ ವಿಮಾನದಲ್ಲಿ ಸ್ಥಳಕ್ಕೆ ತೆರಳುವ ಮೂಲಕ ಪೋಷಕರಿಗೆ ಧೈರ್ಯ ತುಂಬಿದ್ದರು. ಇದನ್ನೂ ಓದಿ: `ಒಂದು ದೇಶ ಒಂದು ಚುನಾವಣೆ’ ಜಾರಿ ಅಗತ್ಯವಿದೆ – ಮಸೂದೆಗೆ ರಾಜ್ಯ ಬಿಜೆಪಿ ಸಂಸದರ ಬೆಂಬಲ
ಅಲ್ಲದೇ ಮುರುಡೇಶ್ವರದಲ್ಲಿ ಮಕ್ಕಳನ್ನು ವಾಪಸ್ ಕೋಲಾರಕ್ಕೆ ಕರೆತರುವ ಕೆಲಸ ಕೈಗೊಂಡಿದ್ದರು. ಅಲ್ಲಿನ ಆಗುಹೋಗುಗಳನ್ನು ಪರಿಶೀಲಿಸಿ ಮೃತದೇಹಗಳನ್ನು ಕೋಲಾರಕ್ಕೆ ಕಳುಹಿಸಿಕೊಟ್ಟಿದ್ದರು. ಬೆಳಗಾವಿ ಅಧಿವೇಶನದ ಹಿನ್ನೆಲೆ ಮುರುಡೇಶ್ವರದಿಂದ ಮತ್ತೆ ವಾಪಸ್ ಬೆಳಗಾವಿಗೆ ತೆರಳಿದ ಶಾಸಕ ಇಂದು (ಮಂಗಳವಾರ) ಕೋಲಾರಕ್ಕೆ ಬಂದ ಕೂಡಲೇ ಮೃತ ವಿದ್ಯಾರ್ಥಿನಿಯರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇನ್ನು ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 50,000 ರೂ. ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿದರು. ಇದನ್ನೂ ಓದಿ: 20 ದಿನದ ಮಗು ಕೊಲ್ಲುವುದಾಗಿ ಬೆದರಿಕೆ – ಪತ್ನಿಯ ಸಹೋದರರಿಂದಲೇ ಪತಿ ಹತ್ಯೆ
ಜಿಲ್ಲೆಯ ಮುಳಬಾಗಿಲು ತಾಲೂಕಿನ ದೊಡ್ಡಗುಟ್ಟಹಳ್ಳಿ ಗ್ರಾಮದ ವಂದನಾ, ಎನ್.ಗಡ್ಡೂರು ಗ್ರಾಮದ ದೀಕ್ಷಾ, ಪೂಜಾರಹಳ್ಳಿ ಗ್ರಾಮದ ಶ್ರವಂತಿ, ಹೆಬ್ಬಣಿ ಗ್ರಾಮದ ಲಾವಣ್ಯ ಪೋಷಕರನ್ನು ಭೇಟಿಯಾಗಿ ಕುಟುಂಬಸ್ಥರಿಗೆ ಶಾಸಕ ಸಾಂತ್ವನ ಹೇಳಿ ಪೋಷಕರಿಗೆ ಧೈರ್ಯ ತುಂಬಿದರು. ಇದೆ ವೇಳೆ ಸ್ಥಳೀಯ ಜೆಡಿಎಸ್ ಮುಖಂಡರಾದ ಕಾಡೇನಹಳ್ಳಿ ನಾಗರಾಜ್, ಆನಂದರೆಡ್ಡಿ, ಶ್ಯಾಮೇಗೌಡ, ರಘುಪತಿ ಗೌಡ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಆಕೆ ಮುಗ್ಧೆ, ತಪ್ಪು ಮಾಡಿಲ್ಲ: ಪವಿತ್ರಾಗೆ ಬೇಲ್ ಸಿಕ್ಕಿದ್ದಕ್ಕೆ ಮಾಜಿ ಪತಿ ಸಂತಸ
ಇದೆ ವೇಳೆ ಮಾತನಾಡಿದ ಶಾಸಕ, ಅಧಿಕಾರಿಗಳ ಸಮ್ಮುಖದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಮಕ್ಕಳ ಸಾವಿಗೆ ಹಾಗೂ ಪೋಷಕರು ಭಯಗೊಳ್ಳದೇ ಇರಲಿ ಎಂದು ಮುರುಡೇಶ್ವರಕ್ಕೆ ತೆರಳಿದ್ದೆ. ಅಲ್ಲಿಂದ ಬಂದು ಮತ್ತೆ ಪೋಷಕರಿಗೆ ಧೈರ್ಯ ತುಂಬಿದ್ದೇನೆ. ಅಲ್ಲದೇ ಸ್ಥಳದಲ್ಲಿ ಮಕ್ಕಳ ಪರಿಸ್ಥಿತಿ ನೋಡಿ ಕರುಳು ಚುರುಕ್ ಎನ್ನುವಂತಾಯಿತು ಎಂದು ಭಾವುಕರಾದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಸ್ಟೋರ್ ಮಾಡಲಾಗಿದ್ದ 24 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!