ಇತ್ತೀಚಿನ ದಿನಗಳಲ್ಲಿ ಬಹುತೇಕರು ಸೌಂದರ್ಯದ ಹಿಂದೆ ಬಿದ್ದು ನಾನಾ ರೀತಿಯ ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ತೆಳ್ಳಗಾಗುವ ನಿಟ್ಟಿನಲ್ಲಿ ಸಾಕಷ್ಟು ಕಲಾವಿದೆಯರು ನಾನಾ ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ವೈಜ್ಞಾನಿಕವಾಗಿ ಅವುಗಳು ಸರಿಯಾದ ಕ್ರಮವಲ್ಲ ಎಂದು ಗೊತ್ತಿದ್ದರೂ, ತಾವು ನೋಡುಗರ ಮುಂದೆ ಸುಂದರವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದ ಶಾರ್ಟ್ ಕಟ್ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಜೀವಕ್ಕೆ ಅಪಾಯ ಆಗುವಂತ ಚಿಕಿತ್ಸೆಗೂ ಅನೇಕರು ಮುಂದಾಗುತ್ತಾರೆ. ಇಂತಹ ಮಾರ್ಗ ಅನುಸರಿಸಿದ ಕಿರುತೆರೆ ನಟಿ ಚೇತನಾ ರಾಜ್ ಪ್ರಾಣ ಬಿಟ್ಟಿದ್ದಾರೆ.
Advertisement
ಯೋಗ, ವ್ಯಾಯಾಮ, ಆಹಾರ ಕ್ರಮಗಳ ಮೂಲಕ ತೂಕ ಇಳಿಸಿಕೊಳ್ಳಲು ತುಂಬಾ ಸಮಯ ಬೇಕಾಗುವುದರಿಂದ ಚಿಕಿತ್ಸೆ ಮೂಲಕ ತೂಕ ಇಳಿಸಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಲಿಪೊಸಕ್ಷನ್ ಸೇರಿದಂತೆ ಅನೇಕ ಚಿಕಿತ್ಸೆ ವಿಧಾನಗಳ ಮೂಲಕ ವೇಟ್ ಲಾಸ್ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಿದೆ ವೈದ್ಯ ಅಂಕಿ ಅಂಶ. ಇದನ್ನೂ ಓದಿ: ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
Advertisement
Advertisement
ವ್ಯಾಯಾಮ ಮತ್ತು ಆಹಾರ ಕ್ರಮದಿಂದ ದೇಹದ ಬೊಜ್ಜನ್ನು ಕರಗಿಸಬಹುದಾಗಿದ್ದರೂ, ಅದು ಸುಲಭವಾಗಿ ಕರಗುವುದಿಲ್ಲ ಎಂಬ ಕಾರಣಕ್ಕಾಗಿ ಲಿಪೋಸಕ್ಷನ್ ರೀತಿಯ ಚಿಕಿತ್ಸೆಗಳು ಇಂದು ಜನಪ್ರಿಯವಾಗಿವೆ. ಇಂತಹ ಚಿಕಿತ್ಸೆ ಪಡೆಯುವ ಮುನ್ನ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲೇಬೇಕು ಎನ್ನುತ್ತಾರೆ ವೈದ್ಯರು.
Advertisement
ಲಿಪೊಸಕ್ಷನ್ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ನಾವು ಅಂದುಕೊಂಡಷ್ಟು ತೂಕ ಇಳಿಯುತ್ತದೆ ಎನ್ನುವುದು ತಪ್ಪು. ವ್ಯಕ್ತಿಯಿಂದ ವ್ಯಕ್ತಿಗೆ ಕೊಬ್ಬು ಕಡಿಮೆ ಆಗುತ್ತದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವ ವ್ಯಕ್ತಿಗೆ ಎಷ್ಟು ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ. ತೂಕ ಇಳಿಸಿಕೊಳ್ಳುವಾಗಿ ಇಂತಿಷ್ಟೇ ತೂಕ ಕಡಿಮೆ ಮಾಡಬೇಕು ಎಂದು ವೈದ್ಯರನ್ನು ಪೋರ್ಸ್ ಮಾಡಬೇಡಿ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ
ಈ ರೀತಿಯ ಚಿಕಿತ್ಸೆಯಿಂದ ಮ್ಯಾಕ್ಸಿಮಮ್, ಐದಾರು ಕೇಜಿ ತೂಕ ಕಡಿಮೆ ಮಾಡಿಸಿಕೊಳ್ಳಬಹುದು. ಇದಕ್ಕಿಂತ ಜಾಸ್ತಿ ತೂಕ ಕಡಿಮೆ ಮಾಡಿಸಿಕೊಳ್ಳಲು ಮುಂದಾದರೆ, ಅಪಾಯ ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಸಾವೂ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು. ಚಿಕಿತ್ಸೆ ಸಮಯದಲ್ಲಿ ಅಥವಾ ಚಿಕಿತ್ಸೆಯ ನಂತರವೂ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಯಶಸ್ಸಿ ಚಿಕಿತ್ಸೆ ನಂತರ ನಿರಂತರವಾಗಿ ವ್ಯಾಯಾಮ ಮತ್ತು ಆಹಾರದ ಕ್ರಮವನ್ನು ಪಾಲಿಸಲೇಬೇಕು. ಮತ್ತು ನುರಿತ ವೈದ್ಯರಿಂದಲೇ ಇಂತಹ ಚಿಕಿತ್ಸೆಯನ್ನು ಪಡೆಯಬೇಕು.
ಇಂತಹ ಚಿಕಿತ್ಸೆಗೆ ಒಳಗಾಗುವ ಮುನ್ನ ಮಾನಸಿಕವಾಗಿ ವ್ಯಕ್ತಿಯು ಸದೃಢವಾಗಿರಬೇಕು ಮತ್ತು ಚಿಕಿತ್ಸೆಯ ಮುನ್ನ ವೈದ್ಯರು ಹೇಳಿದ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿರಬೇಕು. ಚಿಕಿತ್ಸೆಗೆ ಭಾಗಿಯಾಗುವಾಗ ಒಬ್ಬರೇ ಹೋಗಬೇಡಿ, ನಿಮ್ಮ ಕುಟುಂಬದವರಿಗೂ ಮಾಹಿತಿ ತಿಳಿಸಿ. ಮತ್ತು ಮತ್ತೊಬ್ಬ ವೈದ್ಯರ ಸಲಹೆಯನ್ನೂ ಪಡೆಯಬೇಕು.