ಈ ಇಂಡಸ್ಟ್ರಿಯಲ್ಲಿ ನಟಿಯರಿಗೆ ಅವಾಸ್ತವಿಕ ಸೌಂದರ್ಯದ ವಿಚಾರವಾಗಿ ತೀವ್ರ ಒತ್ತಡ ಹಾಕಲಾಗುತ್ತಿದೆ ಎಂದು ಮೋಹಕ ತಾರೆ ರಮ್ಯಾ ನಟಿಯರು ಎದುರಿಸುವ ಸವಾಲನ್ನು ಬಿಚ್ಚಿಡುವ ಮೂಲಕ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
Advertisement
ಯುವನಟಿ ಚೇತನಾ ರಾಜ್ ನಿಧನಕ್ಕೆ ಸಂತಾಪ ಸೂಚಿಸಿದ ರಮ್ಯಾ, ಪ್ಲಾಸ್ಟಿಕ್ ಸರ್ಜರಿಯಿಂದ ಯುವ ನಟಿ ನಿಧನರಾಗಿರುವ ಸುದ್ದಿ ತಿಳಿಯಿತು. ನನ್ನ ಕಾಲಿನ ಟ್ಯೂಮರ್ ತೆಗೆಸಿದ ಬಳಿಕ ನಾನು ದಪ್ಪಗಾದೆ. ನಾನು ಈಗ ವೇಟ್ ಲಾಸ್ ಜರ್ನಿಯಲ್ಲಿದ್ದೆ. ಆದರೆ ನನಗೆ ಜೀವ ಕಳೆದುಕೊಂಡ ಈ ನಟಿ ಬಗ್ಗೆ ಸಹಾನುಭೂತಿಯಿದೆ ಎಂದರು. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ
Advertisement
Advertisement
ಇಂಡಸ್ಟ್ರಿಯಲ್ಲಿ ಮಾನದಂಡ ನಿಗದಿಪಡಿಸಿರುವುದು ಪುರುಷರು. ಮಹಿಳೆಯರು ನೀವು ನೀವಾಗಿರಲು ಬೇರೆ ದಾರಿಯನ್ನು ಅರಿತಿರಬೇಕು. ಜಗತ್ತು ನೀವು ಹೇಗಿರಬೇಕು ಎಂದು ನಿರ್ಧರಿಸಲು ಬಿಡಬೇಡಿ ಎಂದು ತಿಳಿ ಹೇಳಿದರು. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ
Advertisement
ಪುರುಷನಾದನು ಸಂಪೂರ್ಣವಾಗಿ ತಲೆಕೂದಲು ಕಳೆದುಕೊಂಡು ಟೋಪಿ ಹಾಕಿಕೊಳ್ಳಬಹುದು. ಮುಖದಲ್ಲಿನ ಒಂದೊಂದು ಗಲ್ಲವೂ 5 ಕೆಜಿ ಇರಬಹುದು. 65 ವರ್ಷವಾದರೂ ಆತ ಹೀರೋ ಆಗುತ್ತಾನೆ. ಆದರೆ ಇದೇ ಮಹಿಳೆಗೆ ಅನ್ವಯವಾಗಿ ಆಕೆ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ ಎಂದು ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಈ ಇಂಡಸ್ಟ್ರಿ ನಟಿಯರ ಪಾತ್ರದ ವಿಚಾರವಾಗಿ ಇನ್ನೂ ಸುಧಾರಣೆ ಆಗಬೇಕು. ಇಂಡಸ್ಟ್ರಿ ಬದಲಾಗಬೇಕು. ಈ ವಿಷಯದ ಕುರಿತು ಮಹಿಳೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಮ್ಯಾ ಆಗ್ರಹಿಸಿದರು.