ಎರಡು ದಿನಗಳ ಹಿಂದೆಯಷ್ಟೇ ನಟ (Actor), ಮಾಡೆಲ್, ಫೋಟೋಗ್ರಾಫರ್ ಆದಿತ್ಯ ಸಿಂಗ್ ರಜಪೂತ್ (Aditya Singh Rajput) (32) ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ (Mumbai Apartment) ತಮ್ಮ ಮನೆಯ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಸಹಜ ಸಾವಾ? ಅಥವಾ ಕೊಲೆಯಾ? ಎನ್ನುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದು, ಆದಿತ್ಯ ತಲೆಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ.
ಆದಿತ್ಯ ಸಿಂಗ್ ರಜಪೂತ್ ಅವರ ತಲೆಯ ಮೇಲೆ ಗಾಯಗಳಿದ್ದು, ರಕ್ತಸ್ರಾವ ಆಗುವಷ್ಟು ಗಾಯಗಳು ಅವಲ್ಲ ಅಂದಿದ್ದಾರೆ. ಹಾಗಾಗಿ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಗಾಗಿಯೂ ಅಧಿಕಾರಿಗಳು ಕಾಯುತ್ತಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ
ಮುಂಬೈನ ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಆದಿತ್ಯ ಸಿಂಗ್ ರಜಪೂತ್ ಅವರನ್ನ ಸ್ನೇಹಿತರೊಬ್ಬರು ಹಾಗೂ ಅಪಾರ್ಟ್‌ಮೆಂಟ್‌ನ ವಾಚ್‌ಮ್ಯಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆ ತಲುಪುವ ಮುನ್ನವೇ ಆದಿತ್ಯ ಸಿಂಗ್ ರಜಪೂತ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದರು.
ಮುಂಬೈನಲ್ಲಿ ಕಾಸ್ಟಿಂಗ್ ಕೋ-ಆರ್ಡಿನೇಟರ್ ಆಗಿಯೂ ಕೆಲಸ ಮಾಡುತ್ತಿರುವ ಆದಿತ್ಯ ಸಿಂಗ್ ರಜಪೂತ್ ನಟ ಹಾಗೂ ಮಾಡೆಲ್ ಕೂಡ ಹೌದು. ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿನ 11ನೇ ಮಹಡಿಯಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ವರದಿಗಳ ಪ್ರಕಾರ, ಡ್ರಗ್ಸ್ ಓವರ್‌ಡೋಸ್‌ನಿಂದಾಗಿ ಆದಿತ್ಯ ಸಿಂಗ್ ರಜಪೂತ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.