ಕಲಬುರಗಿ: ಮದ್ಯವ್ಯಸನದ ಚಟ ಬಿಡಿಸುವ ಔಷಧಿ ಸೇವಿಸಿ, ಪುಟ್ಟ ಬಾಲಕನೊಬ್ಬನು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ವಾಡಿ ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್ (08) ಮೃತ ಬಾಲಕ. ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ (ಚಟ) ಹವ್ಯಾಸವಿತ್ತು. ಅದನ್ನು ಬಿಡಿಸಲು ಮೆಣಸಿನ ಭಜ್ಜಿಯಲ್ಲಿ ಔಷಧಿ ಮಿಶ್ರಣ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
ಅದೇ ಔಷಧಿ ಮಿಶ್ರಣ ಮಾಡಿ ಇಡಲಾಗಿದ್ದ ಮೆಣಸಿನ ಬಜ್ಜಿ ಸೇವನೆಯಿಂದ ಬಾಲಕನು ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ವಾಂತಿ ಭೇದಿಯಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೈ ನೋವೆಂದು ಆಸ್ಪತ್ರೆಗೆ ಬಂದ ಯುವತಿ ಸಾವು- ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆರೋಪ