ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ದಾರುಣ ಸಾವು – ಸ್ಫೋಟಕ ರಹಸ್ಯ ಬಿಚ್ಚಿಟ್ಟ ಆ ಪತ್ರ

Public TV
2 Min Read
Male Mahadeshwar Tiger Death

-ಜೂ.6ರಂದೇ ಚಾಮರಾಜನಗರ ಪೊಲೀಸರಿಂದ ಅರಣ್ಯ ಇಲಾಖೆಗೆ ಬಂದಿದ್ದ ಪತ್ರ

ಚಾಮರಾಜನಗರ: ಮಲೆ ಮಹದೇಶ್ವರನ ಬೆಟ್ಟದಲ್ಲಿ (Male Mahadeshwar Hills) ವಿಷಪ್ರಾಶನದಿಂದಾಗಿ ಐದು ಹುಲಿಗಳು ದಾರುಣವಾಗಿ ಸಾವನ್ನಪ್ಪಿವೆ. ಇದೀಗ 20 ದಿನಗಳ ಹಿಂದೆಯೇ ಅರಣ್ಯ ಇಲಾಖೆಗೆ (Forest Department) ಬಂದಿದ್ದ ಪತ್ರವೊಂದು ಸಾವಿನ ರಹಸ್ಯವನ್ನು ಬಿಚ್ಚಿಡುತ್ತಿದೆ.Male Mahadeshwar Tiger Death 1

ಹೌದು, ಹುಲಿಸಂರಕ್ಷಿತ ತಾಣವಾದ ಕರ್ನಾಟಕದಲ್ಲೇ ಈ ರೀತಿ ನಡೆದಿದ್ದು ಘೋರ ಅನ್ಯಾಯ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳು ಸಾವನ್ನಪ್ಪಿದ 20 ದಿನಗಳ ಮುಂಚೆಯೇ ಚಾಮರಾಜನಗರ ಪೊಲೀಸರು (Chamarajanagar Police) ಅರಣ್ಯ ಇಲಾಖೆಗೆ ಪತ್ರವೊಂದನ್ನು ಬರೆದಿದ್ದರು. ಈ ಪತ್ರವನ್ನು ಅರಣ್ಯ ಇಲಾಖೆ ಮುಂಚೆಯೇ ಓದಿ ಅಲರ್ಟ್ ಆಗಿದ್ದರೆ ಈ ಐದು ಹುಲಿಗಳ ಸಾವನ್ನು ತಡೆಯಬಹುದಿತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.ಇದನ್ನೂ ಓದಿ: 5 ಹುಲಿಗಳ ನಿಗೂಢ ಸಾವು – ವಿಷ ಹಾಕಿದ್ದ ದುಷ್ಕರ್ಮಿ ಸೇರಿ ಐವರು ವಶಕ್ಕೆ

Male Mahadeshwar Tiger Death 3

ಪತ್ರದಲ್ಲಿ ಏನಿದೆ?
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳ್ಳಬೇಟೆಗಾರರ ಹಾವಳಿ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆಗೆ ಚಾಮರಾಜನಗರ ಪೊಲೀಸರು ತಿಳಿಸಿದ್ದರು. ತಮಿಳುನಾಡು (Tamilnadu) ರಾಜ್ಯದ ಸೇಲಂ, ಕೃಷ್ಣ ಗಿರಿ, ಧರ್ಮಪುರಿ ಸೇರಿದಂತೆ ಮೂರು ಜಿಲ್ಲೆಯ ಗಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸೇರಿಕೊಂಡಿದೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳು, ಹಾದುಹೋಗುವ ವಾಹನಗಳ ಪರಿಶೀಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳ್ಳಬೇಟೆಗಾರರ ಬಗ್ಗೆ ನಿಗಾ ಇಡಲು ಗೋಪಿನಾಥಮ್ ಮತ್ತು ಪಾಲರ್ ಕೂಡುವ ಜಾಗದಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್ಗಾಗಿ ಅನುಮತಿ ಕೋರಿ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿಯ ಘಟಕಕ್ಕೆ ಜೂ.6ರಂದು ಪತ್ರ ಬರೆದಿದ್ದರು.

Male Mahadeshwar Tiger Death 4

ಸದ್ಯ ಪತ್ರವನ್ನು ಓದಿ ಕಳ್ಳಭೇಟೆಗಾರರ ನಿಗಾಕ್ಕೆ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಿದ್ದರೆ ಅಥವಾ ಅರಣ್ಯ ಅಧಿಕಾರಿಗಳು ಕೊಂಚ ಅಲರ್ಟ್ ಆಗಿದ್ದರೆ ಈ ಅನಾಹುತ ತಪ್ಪಿಸಬಹುದಾಗಿತ್ತು ಎನ್ನುವ ಮಾತುಗಳು ಕೇಳಿ ಬಂದಿವೆ. ಜೊತೆಗೆ ಅನುಮಾನಾಸ್ಪವಾಗಿ ಓಡಾಡುತ್ತಿರುವ ಬಗ್ಗೆ ನಿಗಾವಹಿಸಿದರೆ ಈ ರೀತಿ ಅನಾಹುತ ಸಂಭವಿಸುತ್ತಿರಲಿಲ್ಲ ಎನ್ನುವುದು ಈ ಪತ್ರದ ಮೂಲಕ ಖಚಿತವಾಗಿದೆ.ಇದನ್ನೂ ಓದಿ: ಜುಲೈ 1 ರಿಂದ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ – ಗ್ರಾಹಕರಿಗೆ ಏನು ಅನುಕೂಲ?

Male Mahadeshwar Tiger Death 5

Share This Article