ಮಂಗಳೂರು: ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಕುಳಾಯಿಯ ಸನ್ ರೈಸ್ ಕಾರ್ಪೋರೇಷನ್ ಕಚೇರಿಯಲ್ಲಿ ನಡೆದಿದೆ.
ಪಕ್ಷಿಕೆರೆ ನಿವಾಸಿ ಸುಶಾಂತ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕಚೇರಿ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ನಿಧನ
ಡೆತ್ ನೋಟ್‍ನಲ್ಲಿ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದು, ನನಗೆ ಯಾರ ನಂಬಿಕೆಯೂ ಉಳಿಸಿಕೊಳ್ಳಲು ಆಗಿಲ್ಲ. ಹಣದ ವಿಚಾರದಲ್ಲಿ ಯಾರಿಗಾದರೂ ತೊಂದರೆ ಆದರೆ ಕ್ಷಮಿಸಿ. ಆನ್ ಲೈನ್ ಲೋನ್ ನವರು ಕರೆ ಮಾಡಿದರೆ ಮೃತನಾಗಿದ್ದೇನೆ ಎಂದು ಹೇಳಿ ಅಂತ ಬರೆದು ಕೊಂಡಿದ್ದಾನೆ. ಇದನ್ನೂ ಓದಿ: ಕಂಟೈನ್ಮೆಂಟ್ ಝೋನ್ ಹೋಮ್‍ನಲ್ಲಿ ಸ್ನೇಹಿತರೊಂದಿಗೆ ಸೋಂಕಿತ ಪಾರ್ಟಿ
ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.