ಕೋಲಾರ: ಬದುಕಿರುವಾಗಲೇ ರೈತನ ಮರಣ ಪ್ರಮಾಣ ಪತ್ರ ನೀಡಿದ್ದ ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಮುಳಬಾಗಿಲು ತಾಲೂಕಿನ ರೈತನೊರ್ವನಿಗೆ ಗ್ರಾಮ ಲೆಕ್ಕಿಗ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿದ್ದ. ಈ ಸಂಬಂಧ ಕೋಲಾರ ಸಹಾಯಕ ಕಮೀಷನರ್ ಪ್ರಕಾಶ್ ಮೀನಾ ತನಿಖೆ ನಡೆಸಿದ್ದರು. ಇದನ್ನು ಆಧಾರಿಸಿ ಮುಳಬಾಗಿಲು ತಾಲೂಕಿನ ಕಸಬಾ ಹೋಬಳಿ ಮಾರಾಂಡಹಳ್ಳಿ ಗ್ರಾಮದಲ್ಲಿ ಗ್ರಾಮ ಲೆಕ್ಕಿಗನಾಗಿದ್ದ ಹಾಗೂ ಪ್ರಸ್ತುತ ಮುಳಬಾಗಿಲು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಅರವಿಂದ್‌ನನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್
ನಡೆದಿದ್ದೇನು?
ಅರವಿಂದ್ 2021ರ ಜೂನ್ 2 ರಂದು ರೈತ ಶಿವರಾಜ್ ಅವರಿಗೆ ಮರಣ ಪ್ರಮಾಣ ಪತ್ರ ನೀಡಿದ್ದ. ಅಷ್ಟೇ ಅಲ್ಲದೆ ಅರವಿಂದ್, ಶಿವರಾಜ್ ಅವರ ಮರಣ ಪ್ರಮಾಣ ಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಅವಮಾನ ಮಾಡಿದ್ದ. ಈ ಹಿನ್ನೆಲೆ ಶಿವರಾಜ್ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅರವಿಂದ್ ವಿರುದ್ಧ ದೂರು ಕೊಟ್ಟಿದ್ದರು.