ಬೆಂಗಳೂರು: ಬಳ್ಳಾರಿ ಆಸ್ಪತ್ರೆಯಲ್ಲಿ (Ballary) ಬಾಣಂತಿಯರ ಸರಣಿ ಸಾವು ವೈದ್ಯರ ನಿರ್ಲಕ್ಷ್ಯದಿಂದಲ್ಲ ಎಂದು ವರದಿ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ತಲೆದಂಡ ಯಾಕಾಗುತ್ತೆ? – ಆರ್.ಬಿ.ತಿಮ್ಮಾಪುರ್
ಬಳ್ಳಾರಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣದ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿವಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೆವು. ಅವರು ಈಗಾಗಲೇ ವರದಿ ಕೊಟ್ಟಿದ್ದಾರೆ. ಬಾಣಂತಿಯರ ಸಾವಿನಲ್ಲಿ ವೈದ್ಯರ ಎಡವಟ್ಟು, ಲೋಪದೋಷ ಏನು ಇಲ್ಲ ಎಂದು ವರದಿ ಬಂದಿದೆ ಎಂದರು.
ಚಿಕಿತ್ಸೆ ಕೊಡುವುದರಲ್ಲಿ ವೈದ್ಯರು ಯಾವುದೇ ತಪ್ಪು ಮಾಡಿಲ್ಲ ಎಂದು ವರದಿ ಬಂದಿದೆ. ಆದರೆ ನಾವು ಔಷಧಿಗಳನ್ನು ಪರಿಶೀಲನೆಗೆ ಕಳಿಸಿದ್ದೇವೆ. ಔಷಧಿಯಲ್ಲಿ ಏನಾದರೂ ಲೋಪ ಆಗಿದೆಯಾ ಎಂದು ಪರೀಕ್ಷೆಗೆ ಕಳಿಸಿದ್ದೇವೆ. ಆ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಡಿವಿಎಸ್ ಬಣ್ಣ ಬಯಲು ಮಾಡ್ತೀನಿ, ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ: ಯತ್ನಾಳ್ ಕಿಡಿ