ಚಿಕ್ಕಬಳ್ಳಾಪುರ: ಹೆರಿಗೆ ಶಸ್ತ್ರ ಚಿಕಿತ್ಸೆಯಾದ (Surgery) ಒಂದು ತಿಂಗಳ ನಂತರ ಬಾಣಂತಿ ಸಾವನ್ನಪ್ಪಿದ್ದು, ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ಸರ್ಕಾರಿ ಆಸ್ಪತ್ರೆಯ (Hospital) ವೈದ್ಯೆ (Doctor) ಕಾರಣ ಎಂದು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ (Government Hospital) ಎದುರು ಇಟ್ಟು ಪ್ರತಿಭಟನೆ (Protest) ನಡೆಸಿದ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
Advertisement
ಚಿಂತಾಮಣಿ ತಾಲೂಕು ನೀಲಂಪಲ್ಲಿ ನಿವಾಸಿ ನೇತ್ರಾವತಿ (25) ಮೃತ ಬಾಣಂತಿಯಾಗಿದ್ದು, ಕಳೆದ ತಿಂಗಳು ಸೆಪ್ಟೆಂಬರ್ 9 ರಂದು ಗೋಪಾಲಗೌಡ ತಮ್ಮ ಪತ್ನಿ ನೇತ್ರಾವತಿಯನ್ನು ಹೆರಿಗೆಗೆಂದು ಚಿಂತಾಮಣಿಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರಿ ರೋಗ ತಜ್ಞೆ ಡಾ. ಎನ್.ಆರ್. ಜಯಂತಿ, ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ನೇತ್ರಾವತಿಗೆ ಸಿಜೇರಿಯನ್ ಆಗಿ ಮೂರು ದಿನಗಳ ನಂತರ ಇದ್ದಕ್ಕಿದಂತೆ ಜಾಂಡೀಸ್ ಕಾಣಿಸಿಕೊಂಡಿದೆ. ಇದರಿಂದ ಇನ್ಫೆಕ್ಷನ್ ಆಗಿ ಲಿವರ್ ಸಮಸ್ಯೆ, ಕಿಡ್ನಿ ವೈಫಲ್ಯ ಮತ್ತು ನರದೌರ್ಬಲ್ಯ ಉಂಟಾಗಿದೆ. ಹೊಲಿಗೆಯನ್ನು ಸರಿಯಾಗಿ ಹಾಕದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಬೇರೆ ಆಸ್ಪತ್ರೆಯ ವೈದ್ಯರು ಮೃತಳ ಸಂಬಂಧಿಕರಿಗೆ ಮನವರಿಕೆ ಮಾಡಿದ್ದಾರೆ. ನೇತ್ರಾವತಿಗೆ ಇನ್ಫೆಕ್ಷನ್ ಅಗಿ ಗಾಯದಲ್ಲಿ ನೀರು, ಕೀವು ತುಂಬಿಕೊಂಡು ಮಲ್ಟಿ ಆರ್ಗನ್ ಸಮಸ್ಯೆಯಿಂದ ನೇತ್ರಾವತಿ ಮೃತ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಹೆದರಿ ನಡು ರಸ್ತೆಯಲ್ಲೇ ಲಾರಿ ಬಿಟ್ಟು ಚಾಲಕ ಪರಾರಿ
Advertisement
Advertisement
ಇದರಿಂದ ಆಕ್ರೋಶಗೊಂಡಿರುವ ನೇತ್ರಾವತಿ ಸಂಬಂಧಿಕರು ಸರ್ಕಾರಿ ಆಸ್ಪತ್ರೆ ವೈದ್ಯೆ ಜಯಂತಿಯನ್ನು ಅಮಾನತು ಮಾಡೊವರೆಗೂ ಶವ ಎತ್ತುವುದಿಲ್ಲವೆಂದು ಧರಣಿ ನಡೆಸಿದರು. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್, ಪ್ರಸೂತಿ ಹಾಗೂ ಸ್ತ್ರಿರೋಗ ತಜ್ಞೆ ಡಾ.ಎನ್.ಆರ್.ಜಯಂತಿಯನ್ನು ಆರೋಗ್ಯ ಇಲಾಖೆ ಆಯುಕ್ತ ಕಚೇರಿಗೆ ವರ್ಗಾವಣೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಸಿಜೇರಿಯನ್ ಮಾಡಿ ಮೂರು ದಿನಗಳ ನಂತರ ನೇತ್ರಾವತಿ ಆರೋಗ್ಯ ಹದಗೆಟ್ಟ ಕಾರಣ ಆಕೆಯ ಪತಿ ಸರ್ಕಾರಿ ವೈದ್ಯೆ ಡಾ.ಜಯಂತಿಯ ಖಾಸಗಿ ಕ್ಲಿನಿಕ್ ಬಳಿ ಹೋಗಿ ಹೇಳಿದ್ರೆ ವೈದ್ಯೆ ಅವಾಚ್ಯವಾಗಿ ಬೈದು ಉಡಾಫೆ ವರ್ತನೆ ತೋರಿದ್ರಂತೆ, ರೋಗಿಗೆ ಸಮರ್ಪಕವಾಗಿ ಗೈಡ್ ಮಾಡುವುದರ ಬದಲು ವೈದ್ಯೆ ಉದ್ಧಟತನ ತೋರಿದ ಕಾರಣ ಬಾಣಂತಿಗೆ ಚಿಕಿತ್ಸೆ ಫಲಕಾರಿಯಾಗದೆ ಒಂದು ತಿಂಗಳ ಗಂಡು ಮಗು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಮೇಲುಗಡೆ ಟೊಮೆಟೊ ಬಾಕ್ಸ್ ಕೆಳಗಡೆ ರಕ್ತಚಂದನ ಸಾಗಾಟ – ಐವರು ಅರೆಸ್ಟ್