ಮುಂಬೈ: ಇಸ್ರೋನ ಬಹುನಿರೀಕ್ಷೆಯ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲು 2.1 ಕಿ.ಮೀ ಅಂತರದಲ್ಲಿ ಸಂಪರ್ಕವನ್ನು ಕಳೆದುಕೊಂಡಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ನಾಗ್ಪುರ್ ಪೊಲೀಸ್ ವಿಕ್ರಮ್ ನಿನಗೆ ದಂಡ ಹಾಕಲ್ಲ ಸಂಪರ್ಕಕ್ಕೆ ಸಿಗು ಎಂದು ಟ್ವೀಟ್ ಮಾಡಿದ್ದಾರೆ,
ಶನಿವಾರ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್, ಲ್ಯಾಂಡಿಂಗ್‍ಗೆ ಕೆಲವು ನಿಮಿಷ ಬಾಕಿಯಿದ್ದಾಗ ತನ್ನ ಕಕ್ಷೆಯನ್ನು ಬದಲಿಸಿ ಇಸ್ರೋದಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ಇದಕ್ಕೆ ಸಂಬಧಿಸಿದಂತೆ ನಾಗ್ಪುರ ಪೊಲೀಸ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Advertisement
Dear Vikram,
Please respond ????????.
We are not going to challan you for breaking the signals!#VikramLanderFound#ISROSpotsVikram @isro#NagpurPolice
— Nagpur City Police (@NagpurPolice) September 9, 2019
Advertisement
ಇಸ್ರೋಗೆ ಸಂಪರ್ಕಕ್ಕೆ ಸಿಗದ ವಿಕ್ರಮ್ ಲ್ಯಾಂಡರ್ ಕುರಿತು ಟ್ವೀಟ್ ಮಾಡಿರುವ ನಾಗ್ಪುರ್ ಪೊಲೀಸರು, ನಮ್ಮ ಪ್ರೀತಿಯ ವಿಕ್ರಮ್. ನೀನು ಸಿಗ್ನಲ್ ಜಂಪ್ ಮಾಡಿದ್ದೀಯಾ ಎಂದು ನಾವು ನಿನಗೆ ದಂಡ ಹಾಕಲ್ಲ. ದಯವಿಟ್ಟು ನೀನು ನಮ್ಮ ಸಂಪರ್ಕಕ್ಕೆ ಸಿಗು ಎಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
Advertisement
ಈಗ ಈ ಟ್ವಿಟ್ಟರ್ ನೋಡಿದ ನೆಟ್ಟಿಗರು ಪೊಲೀಸರ ಈ ಟ್ವೀಟ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಟ್ವೀಟ್ ಅದ್ಭುತವಾಗಿದೆ. ನಿಮ್ಮ ಹಾಗೇ 130 ಕೋಟಿ ಭಾರತೀಯರು ವಿಕ್ರಮನ ಸಂಪರ್ಕಕ್ಕೆ ಕಾಯುತ್ತಿದ್ದಾರೆ ಎಂದು ಕೆಲವರು ರೀಟ್ವೀಟ್ ಮಾಡಿದ್ದಾರೆ. ಒಳ್ಳೆಯ ಮಾತುಗಳು ಸೋ ಕ್ಯೂಟ್ ಎಂದು ಕಮೆಂಟ್ ಮಾಡಿದ್ದಾರೆ.
Advertisement
ಸಾಫ್ಟ್ ಲ್ಯಾಂಡಿಂಗ್ ಆಗದೆ ಹಾರ್ಡ್ ಲ್ಯಾಂಡಿಂಗ್ ಆದ ಕಾರಣ ವಿಕ್ರಮ್ ಲ್ಯಾಂಡರ್ ಮತ್ತೆ ಸಂಪರ್ಕ ಸಿಗುವುದು ಕಷ್ಟ ಎಂದು ಹೇಳಲಾಗಿತ್ತು. ಆದರೆ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಬಿದ್ದಿರುವ ಥರ್ಮಲ್‍ನ ಫೋಟೋವನ್ನು ಕಳುಹಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಭಾನುವಾರ ಹೇಳಿದ್ದರು. ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಎಲ್ಲಿದೆ ಮತ್ತು ಹೇಗಿದೆ ಎಂಬಿತ್ಯಾದಿಗಳ ವಿಷಯಗಳ ಮಾಹಿತಿ ಸಿಗಲಿದೆ ಎಂದು ಹಲವು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು.
ಹಿರಿಯ ವಿಜ್ಞಾನಿಯೊಬ್ಬರು, ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಿಗುವ ಸಾಧ್ಯತೆಗಳಿವೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಸ್ಥಳ ತಲುಪಲು ಆರ್ಬಿಟರ್ ಗೆ ಮೂರು ದಿನ ಸಮಯ ಬೇಕಾಗುತ್ತದೆ. ಕೊನೆಯ ಕ್ಷಣದಲ್ಲಿ ವಿಕ್ರಮ್ ತನ್ನ ಪಥ ಬದಲಿಸಿದ್ದರಿಂದ ಸಂಪರ್ಕ ಕಡಿತಗೊಂಡಿತು ಎಂದು ವಿವರಿಸಿದ್ದರು.