44 ಯೋಧರನ್ನು ಬಲಿ ಪಡೆದುಕೊಂಡ ಉಗ್ರನೂ ಭಾರತೀಯ..!

Public TV
1 Min Read
TERROR

ಪುಲ್ವಾಮ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‍ಪಿಎಫ್ ಯೋಧರು ಬರುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ್ದ ಉಗ್ರ ಆದಿಲ್ ಅಹಮ್ಮದ್ ಧರ್ ಕೂಡಾ ಭಾರತೀಯ ಎಂದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಕಾಕ್ಪೊರಾ ನಿವಾಸಿಯಾದ ಈತ ಜೈಶ್ ಎ ಮೊಹ್ಮದ್ ಸಂಘಟನೆಯಿಂದ ಪ್ರೇರೇಪಣೆಗೊಂಡಿದ್ದನು. ಕಳೆದ ವರ್ಷ ಉಗ್ರ ಸಂಘಟನೆ ಸೇರಿದ್ದ ಈತ ಇದೀಗ ಹುಟ್ಟಿದ ಮಾತೃಭೂಮಿಯ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾನೆ. ಇದನ್ನೂ ಓದಿ: ಈ ವಿಡಿಯೋ ರಿಲೀಸ್ ಆಗೋ ವೇಳೆ ನಾನು ಸ್ವರ್ಗದಲ್ಲಿ ಇರ್ತೀನಿ: ನರಹಂತಕ ಉಗ್ರ

car attack 1

ಈತನಿಗೆ ಕಳೆದೊಂದು ವರ್ಷದಿಂದ ಆತ್ಮಾಹುತಿ ದಾಳಿಯ ಬಗ್ಗೆ ಪಾಕ್‍ನ ಅಬ್ದುಲ್ ರಶೀದ್ ಘಾಜಿ ಎಂಬಾತ ಟ್ರೈನಿಂಗ್ ಕೊಟ್ಟಿದ್ದನು. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಹೊಣೆಯನ್ನು ನಿಷೇಧಿತ ಜೈಶ್-ಇ-ಮೊಹಮದ್ ಸಂಘಟನೆ ಹೊತ್ತುಕೊಂಡಿದ್ದು, ಈ ಸಂಬಂಧ ವಿಡಿಯೋವನ್ನು ಹರಿಬಿಟ್ಟಿತ್ತು. ಇದನ್ನೂ ಓದಿ:  ಕಾರು ಡಿಕ್ಕಿ ಹೊಡೆದ ನಂತ್ರ ಗುಂಡಿನ ದಾಳಿ: 2,547 ಸೈನಿಕರು ಟಾರ್ಗೆಟ್, 100 ಮೀಟರ್ ದೂರಕ್ಕೆ ಹಾರಿತು ದೇಹ!

ಕಾಶ್ಮೀರದ ಪುಲ್ವಾಮ ದಾಳಿ ಬಳಿಕ ಜೈಶ್-ಇ-ಮೊಹಮದ್ ಸಂಘಟನೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿತ್ತು. ದಾಳಿ ನಡೆಸುವ ಮುನ್ನವೇ ಆದಿಲ್ ದಾರ್, ಸಂಘಟನೆಯ ಧ್ವಜದ ಮುಂದೆ ಶಸ್ತ್ರಸಜ್ಜಿತನಾಗಿ ನಿಂತು ತಾನು ಮಾಡಲು ಹೊರಟ ಕೃತ್ಯದ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋದಲ್ಲಿ ತನ್ನ ಬೆಂಬಲಿಸುವಂತೆ ಕಾಶ್ಮೀರಿ ಮುಸ್ಲಿಮರಲ್ಲಿಯೂ ಆತ ಮನವಿ ಮಾಡಿಕೊಂಡಿದ್ದು, ಈ ವಿಡಿಯೋ ಬಿಡುಗಡೆ ಆಗುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಆದೀಲ್ ದಾರ್ ಹೇಳಿಕೊಂಡಿದ್ದನು.

https://www.youtube.com/watch?v=iKU4BcVVdnE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *