ಹುಬ್ಬಳ್ಳಿ: ಹಾಡಹಗಲೇ ಹುಬ್ಬಳ್ಳಿಯ ಸಬ್ ಜೈಲಿನ ಎದುರು ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದ್ದು, ಎರಡು ಗುಂಪುಗಳು ತಲ್ವಾರ್, ಮಚ್ಚು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಮಾರುತಿ ಸಿಯಾಜ್ ಕಾರು ಸಂಪೂರ್ಣ ಜಖಂಗೊಂಡಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ ಎನ್ನಲಾಗಿದೆ.
ವಿಶ್ವೇಶ್ವರ ನಗರದಲ್ಲಿರುವ ಸಬ್ ಜೈಲ್ಲಿನಲ್ಲಿದ್ದ ಗಿರಿ ಎಂಬ ವ್ಯಕ್ತಿಯನ್ನ ನೋಡಲು ಬಂದಿದ್ದ ಟೀಂ ಮೇಲೆ ಇಮ್ರಾನ್ ಬಿಜಾಪುರ ಗ್ಯಾಂಗ್ ಅಟ್ಯಾಕ್ ಮಾಡಿದೆ. ಈ ಹಿಂದೆ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಬಂಧನವಾಗಿದ್ದ ಗಿರಿಯನ್ನು ನೋಡಲು ಬಂದಿದ್ದ ಆತನ ಸಹಚರರ ಮೇಲೆ ಏಕಾಏಕಿ ಹಲ್ಲೆ ಮಾಡಲಾಗಿದೆ.
ಏನಿದು ಘಟನೆ: ಕಳೆದ ವಾರದ ವಿವಾದವೊಂದರ ಸಂಬಂಧ ಶ್ಯಾಮ್ ಜಾಧವ್ ಹಾಗೂ ಇಮ್ರಾನ್ ಕಡೆಯ ಯುವಕರು ಹಳೇ ಹುಬ್ಬಳ್ಳಿಯ ನೇಕಾರ ನಗರದಲ್ಲಿ ಇಮ್ರಾನ್ ಬಿಜಾಪುರ ಎಂಬ ಯುವಕನಿಗೆ ಚಾಕು ಇರಿದಿದ್ದರು. ಬಳಿಕ ಇಮ್ರಾನ್ ಬಿಜಾಪೂರ ಕಡೆಯವರು ಗಿರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿ, ಸೂರಿ ಎಂಬುವರನ್ನು ಬಂಧಿಸಿ ಉಪ ಕಾರಾಗೃಹದಲ್ಲಿ ಇಡಲಾಗಿತ್ತು.
ಇಂದು ಗಿರಿ, ಸೂರಿಯನ್ನು ನೋಡಲು ಹತ್ತಕ್ಕೂ ಹೆಚ್ಚು ಜನ ಇಂದು ಜೈಲಿನ ಕಡೆ ಬಂದಿದ್ದರು. ವಿಷಯ ತಿಳಿದ ಇಮ್ರಾನ್ ಅವರ ಕಡೆಯವರು ಹಲ್ಲೆ ನಡೆಸಿದ್ದಾರೆ. ರವಿ ಮತ್ತು ಜುನೈದ್ ಮುಲ್ಲಾ ಸೇರಿ ಸುಮಾರು ಹದಿನೈದು ಜನರ ಮೇಲೆ ದಾಳಿ ನಡೆಸಲಾಗಿದ್ದು, ಚಂದ್ರು ಗಡಗಿ, ಗಣೇಶ್ ಜಾಧವ್ ಸೇರಿ ಇಪ್ಪತ್ತೈದು ಜನರ ತಂಡ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆಗೆ ಹಳೇ ದ್ವೇಷ ಕಾರಣ ಎನ್ನಲಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]