ಜೆರುಸಲೆಮ್: ನಿರಾಶ್ರಿತರ ಶಿಬಿರದಲ್ಲಿ (Refugee Camp) ಭಾರೀ ಅಗ್ನಿ ಅವಘಡ (Fire) ಉಂಟಾಗಿ 7 ಮಕ್ಕಳು ಸೇರಿದಂತೆ 21 ಜನರು ಸಜೀವದಹನಗೊಂಡಿರುವ ಘಟನೆ ಇಸ್ರೇಲ್‌ನ ಗಾಜಾ ಪಟ್ಟಿಯಲ್ಲಿ (Gaza Strip) ನಡೆದಿದೆ.
ಗಾಜಾದ ಜನನಿಬಿಡ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಹೊತ್ತಿಕೊಂಡಿದೆ. 4 ಅಂತಸ್ತಿನ ವಸತಿ ಕಟ್ಟಡದ ಮೇಲಿನ ಮಹಡಿ ಸ್ಫೋಟಗೊಂಡಿದ್ದು, ಭಾರೀ ಬೆಂಕಿ ಉಂಟಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು 1 ಗಂಟೆಗೂ ಅಧಿಕ ಸಮಯ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
#Gaza ???????????????? #Palestine
Pray for Gaza !
Twenty one Palestinians, including seven children, have died after a huge fire broke out at a residential building in Jabalia city, north of Gaza in Palestine and the fire still until now#غزة #حريق #جباليا #حريق_غزة #فلسطين#FreePalestine pic.twitter.com/iexft82ZXU
— Islam Essa????????#Gaza????♀️???? (@IslamEssa_Gaza) November 17, 2022
Advertisement
ಪ್ರಾಥಮಿಕ ತನಿಖೆಯ ಪ್ರಕಾರ ಕಟ್ಟಡದೊಳಗೆ ಹೆಚ್ಚಿನ ಪ್ರಮಾಣದ ಗ್ಯಾಸೋಲಿನ್ ಅನ್ನು ಸಂಗ್ರಹಿಸಲಾಗಿದ್ದು, ಇದು ಬೆಂಕಿಯ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಕಟ್ಟಡದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದು, ಯಾರೊಬ್ಬರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
Advertisement
ಘಟನೆಗೆ ಸಂಬಂಧಿಸಿದ ವೀಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿರುವ ಕಟ್ಟಡದ ಹೊರಗಡೆ ಜನರು ಕಿರುಚುತ್ತಿರುವುದು ಕಂಡುಬಂದಿದೆ. ಸಂತ್ರಸ್ತರ ಸಂಬಂಧಿಕರು ಅಳುತ್ತಾ ಅವರ ರಕ್ಷಣೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಗುಂಡಿಗೆ ಬಿದ್ದು ಕೋಮಾಗೆ ಜಾರಿದ್ದ ಸಂದೀಪ್- ಪ್ರಜ್ಞಾವಸ್ಥೆಗೆ ಬಂದ ಸವಾರನಿಗೆ ಸಿಗ್ತಿಲ್ಲ ಆಸ್ಪತ್ರೆ ಬೆಡ್
Advertisement
ಪ್ಯಾಲೇಸ್ಟಿನಿಯನ್ ಅಥಾರಿಟಿ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಇದನ್ನು ರಾಷ್ಟ್ರೀಯ ದುರಂತ ಎಂದು ಕರೆದಿದ್ದಾರೆ. ದುರ್ಘಟನೆಯಲ್ಲಿ ಮಡಿದವರಿಗಾಗಿ 1 ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಓವರ್ ಟೇಕ್ ವೇಳೆ ದುರಂತ- ಬಿಎಂಟಿಸಿ ಬಸ್ಸಿಗೆ ಬೈಕ್ ಸವಾರ ಬಲಿ