ಕಲಬುರಗಿ: ಗಾಂಜಾ ದಂಧೆ ಪ್ರಕರಣದ ಕಾರ್ಯಾಚರಣೆಗೆ ತೆರಳಿದ್ದ ಸಿಪಿಐ (CPI) ಇಲ್ಲಾಳ ನೇತೃತ್ವದ ಪೊಲೀಸರ (Kalaburagi Police) ತಂಡದ ಮೇಲೆ ಗಾಂಜಾ ದಂಧೆಕೋರರು ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿಯಂಚಿನಲ್ಲಿರುವ (Karnataka Maharashtra Border) ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಭೋಸಗಾ ಗ್ರಾಮದಲ್ಲಿ ಹಲ್ಲೆ ನಡೆದಿದೆ. ಆ ಗ್ರಾಮದಲ್ಲಿಯೇ ಮಹಾರಾಷ್ಟ್ರ ಮೂಲದ ಕೆಲ ವ್ಯಕ್ತಿಗಳು ಗಾಂಜಾ ಬೆಳೆದಿದ್ದರು ಎಂದು ಹೇಳಲಾಗಿದೆ.
Advertisement
Advertisement
ದಂಧೆಕೋರರು ಕಲಬುರಗಿ ಜಿಲ್ಲಾ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲೆ, ಮುಖ, ಹೊಟ್ಟೆ ಭಾಗಗಳಲ್ಲಿ ಗಂಭೀರ ಗಾಯಗೊಂಡಿರುವ ಇಲ್ಲಾಳ ಅವರೀಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಐಸಿಯು (ICU)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಏನಿದು ಗಾಂಜಾ ಕೇಸ್?
ಗಾಂಜಾ ದಂಧೆ ಕೇಸ್‌ನಲ್ಲಿ ಕಾರ್ಯಾಚರಣೆಗೆ ಹೋಗಿದ್ದ ಇಲ್ಲಾಳ ನೇತೃತ್ವದ ಪೊಲೀಸ್ ತಂಡ, ಕಳೆದ 2-3 ದಿನಗಳ ಹಿಂದೆ ಆರೋಪಿ ಸಂತೋಷ ಸೇರಿದಂತೆ ಅನೇಕ ಗಾಂಜಾ ದಂಧೆಕೋರರನ್ನೂ ಬಂಧಿಸಲಾಗಿತ್ತು. ನಿನ್ನೆ ಮಧ್ಯಾಹ್ನವು ಸಹ ಗಾಂಜಾ ದಂಧೆ ಬೇಧಿಸಲು ಸಿಪಿಐ (CPI) ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ 10 ಜನರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ (Maharashtra) ಹೋಗಿತ್ತು. ಇದನ್ನೂ ಓದಿ: ನನ್ನ ಸ್ಫೋಟಕ ಬ್ಯಾಟಿಂಗ್ ಕಂಡು ನಾನೇ ಶಾಕ್ – ಪಂದ್ಯ ಗೆದ್ದರೂ ಹೀಗೇಕೆ ಅಂದ್ರು ಹಿಟ್‌ಮ್ಯಾನ್?
Advertisement
ಗಾಂಜಾ ಬೆಳೆಯುವ ಹೊಲಗಳಿಗೆ (Ganja Plant) ಹೋಗಿದ್ದ ಪೊಲೀಸರ ಮೇಲೆ ರಾತ್ರಿ 9:30ರ ವೇಳೆಗೆ ಸುಮಾರು 30-40 ಮಂದಿ ಗಾಂಜಾ ದಂಧೆಕೋರರು ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ ಇಲ್ಲಾಳ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಗಾಂಜಾ ದಂಧೆಕೋರರು ಪೊಲೀಸರನ್ನೆ ಅಟ್ಟಾಡಿಸಿದ್ದಾರೆ. ಕೊನೆಗೆ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಪಿಐ ಇಲ್ಲಾಳ ಅವರನ್ನ ಮಧ್ಯರಾತ್ರಿ 2:30ರ ವೇಳೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಕಲಬುರಗಿಯ ಖಾಸಗಿ ಆಸ್ಪತ್ರೆಗೆ (Private Hospital) ಎಸ್ಪಿ ಈಶಾ ಪಂತ್ ಭೇಟಿ ನೀಡಿದ್ದು, ಶ್ರೀಮಂತ ಇಲ್ಲಾಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಮಂತ್ ಇಲ್ಲಾಳಗೆ ಡಾ.ಸುದರ್ಶನ್ ಲಾಖೆ, ಡಾ.ರಾಕೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು
ಈ ಕುರಿತು ಮಾಹಿತಿ ನೀಡಿರುವ ವೈದ್ಯ (Doctor) ಡಾ.ಸುದರ್ಶನ, ಶ್ರೀಮಂತ ಇಲ್ಲಾಳ್ ಅವರ ಸ್ಥಿತಿ ಗಂಭೀರವಾಗಿದೆ. ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಪಕ್ಕೆಲುಬು, ಮುಖದ ಎಲುಬುಗಳು ಮುರಿದಿವೆ. ಮೆದುಳಿನ ಭಾಗಕ್ಕೂ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಮುಂಜಾನೆ 4 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸುಧಾರಣೆಗೆ ಎಲ್ಲಾ ರೀತಿಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ICU (ತೀವ್ರ ನಿಗಾ ಘಟಕ)ನಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಸವಕಲ್ಯಾಣ ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.