ಚಾಮರಾಜನಗರ: ಜಮೀನಿಗೆ ನುಗ್ಗಿ ಜೋಳದ ಬೆಳೆ ತಿಂದಿವೆ ಎಂದು ಮಚ್ಚಿನಿಂದ ಎತ್ತುಗಳ ಕಾಲು ಕತ್ತರಿಸಿದ ಅಮಾನವೀಯ ಘಟನೆ ಹನೂರು (Hanuru) ತಾಲೂಕಿನ ಒಡೆಯರ್ ಪಾಳ್ಯದ ಟಿಬೆಟಿಯನ್ ಕ್ಯಾಂಪಿನಲ್ಲಿ ನಡೆದಿದೆ.
ಆಹಾರ ಅರಸಿ ದನಕರುಗಳು ಜಮೀನಿಗೆ ಬಂದು ಜೋಳವನ್ನು ಮೇಯಲು ಆರಂಭಿಸಿವೆ. ಇದನ್ನು ನೋಡಿದ ಟಿಬೆಟಿಯನ್ ರೈತ ಸಿಟು ಅಲಿಯಾಸ್ ಕಿಟುಪ್ ಎಂಬಾತ ಏಕಾಏಕಿ ಬಂದು ದನಕರುಗಳ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ದಾಳಿಗೊಳಗಾದ 10ಕ್ಕೂ ಹೆಚ್ಚು ಜಾನುವಾರುಗಳು ನಡೆಯಲಾರದೇ ಹೊಲದಲ್ಲಿ ಕುಸಿದು ಬಿದ್ದಿವೆ. ಇದನ್ನೂ ಓದಿ: 250ಕ್ಕೂ ಹೆಚ್ಚು ಮಂದಿಗೆ ವಂಚನೆ – ಗುಜರಾತ್, ಯುಪಿಯಲ್ಲೂ ಮ್ಯಾಟ್ರಿಮೋನಿ ವರನ ಪಾರುಪತ್ಯ ಅಷ್ಟಿಷ್ಟಲ್ಲ
Advertisement
Advertisement
ಈ ದೃಶ್ಯವನ್ನು ಕಂಡು ಗುಂಡಿಮಾಳ ಗ್ರಾಮದ ರೈತರು ಕಣ್ಣೀರಿಟ್ಟಿದ್ದಾರೆ. ನಾವು ಜೀವನೋಪಾಯಕ್ಕಾಗಿ ಈ ದನಕರುಗಳನ್ನೇ ನಂಬಿದ್ದೇವೆ. ಹೊರಗಿನಿಂದ ಬಂದ ಟಿಬೆಟಿಯನ್ನರು ನಮಗೆ ತೊಂದರೆ ಕೊಡುತ್ತಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಆತನಿಂದ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Advertisement
Advertisement
ಈ ಸಂಬಂಧ ಹನೂರು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಹಸುಗಳಿಗೆ ಪಶು ಇಲಾಖೆಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇದನ್ನೂ ಓದಿ: ಮಗುವನ್ನು ನೆಲಕ್ಕೆ ಬಡಿದಿದ್ದ ತಂದೆ- ಚಿಕಿತ್ಸೆ ಫಲಿಸದೇ ಕಂದಮ್ಮ ಸಾವು