ಬೆಂಗಳೂರು: ಬಾರ್‍ನಲ್ಲಿ ಚೆನ್ನಾಗಿ ಕುಡಿದ ಪುಂಡರು ಬಿಲ್ ಕೇಳಿದ್ದಕ್ಕೆ ಬಾರ್ ಮಾಲೀಕನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಪಿಣ್ಯ 2ನೇ ಹಂತದ ಜೆಎಂಆರ್ ಬಾರ್ & ರೆಸ್ಟೋರೆಂಟ್‍ನಲ್ಲಿ ಈ ಘಟನೆ ನಡೆದಿದೆ.
Advertisement
ಮಚ್ಚು ಲಾಂಗ್‍ಗಳನ್ನು ಹಿಡಿದಿದ್ದ ಮೂವರು ಪುಂಡರು ದಾಂಧಲೆ ನಡೆಸಿದ್ದಾರೆ. ಬಾರ್ ಮಾಲೀಕರ ಮೇಲೆ ಮಚ್ಚು ಬೀಸಿದ್ದು ಮಾತ್ರವಲ್ಲದೇ ಬಾರ್‍ನಲ್ಲಿದ್ದ ಗ್ರಾಹಕರಿಗೂ ತೊಂದರೆ ನೀಡಿದ್ದಾರೆ.
Advertisement
ಈ ಘಟನೆ ಮೇ 9 ರಂದು ನಡೆದಿದ್ದು, ಬಾರ್‍ನಲ್ಲಿದ್ದ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಪುಂಡಾಟ ಸೆರೆಯಾಗಿದೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.