Districts

ತಾಯಿಯನ್ನು ನಿಂದಿಸಿದ್ದಕ್ಕೆ ಅರೆಬೆತ್ತಲೆಗೊಳಿಸಿ ನಡುರೋಡಲ್ಲೇ ಹಲ್ಲೆ

Published

on

Share this

– ಕಾನೂನು ಕೈಗೆತ್ತಿಕೊಂಡ ಯುವಕರು

ಗದಗ: ತಾಯಿಯನ್ನು ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ಮಕ್ಕಳು ಮತ್ತು ಕುಟುಂಬಸ್ಥರು ಆರೋಪಿಗಳನ್ನು ಅರೆಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಗದಗದ ನರಗುಂದಪಟ್ಟದಲ್ಲಿ ನಡೆದಿದೆ.

ನರಗುಂದ ಪಟ್ಟಣದ ಮಲ್ಲಿಕ್ ಜಾನ್ ನಲಬಂದ್, ಖಾದಿರ್ ಸಾಬ್ ಮಲ್ಲಸಮುದ್ರ, ಗೌಸುಸಾಬ್ ರಾಹುತ್ ಮೇಲೆ ಮಾರಣಾಂತಿಕ ಹಲ್ಲೆಗೊಳಗಾದವರು. ಬಸುರಾಜ್ ಗಡೇಕರ್, ಸಂಜೀವ್ ನಲವಡಿ, ತವನಪ್ಪ ಸಂಬಳ ಹಲ್ಲೆ ಮಾಡಿದವರು ಅಂತ ಗೊತ್ತಾಗಿದೆ.

ನಡೆದಿದ್ದೇನು: ತಾಯಿಯನ್ನು ಹಿಯಾಳಿಸಿ ಮಾತನಾಡಿದ್ದ ವೀಡಿಯೋವೊಂದನ್ನು ಆರೋಪಿಗಳು ವಾಟ್ಸಾಪ್‍ನಲ್ಲಿ ಹಾಕಿದ್ರು. ಇದರಿಂದ ಸಿಟ್ಟುಗೊಂಡ ಮಕ್ಕಳು ಹಾಗೂ ಕುಟುಂಬಸ್ಥರು ರಸ್ತೆ ತುಂಬೆಲ್ಲಾ ಮೂವರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪಟ್ಟಣದ ಮಾರುಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪೊಲೀಸ್ ಠಾಣೆಯವರೆಗೂ ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಥಳಿಸಿ ಆರೋಪಿಗಳನ್ನು ಪೊಲೀಸರು ಕೈಗೆ ನೀಡಿದ್ದಾರೆ.

ಸದ್ಯಕ್ಕೆ ಹಲ್ಲೆಗೊಳಗಾದ ಯುವಕರಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದ ಮೂವರನ್ನ ಗದಗ ಜಿಲ್ಲೆ ನರಗುಂದ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

https://www.youtube.com/watch?v=hM4ppiA4l3Y&feature=youtu.be

Click to comment

Leave a Reply

Your email address will not be published. Required fields are marked *

Advertisement
Advertisement