ಭೀಕರ ಅವಘಡಕ್ಕೆ 13 ಮಂದಿ ಬಲಿ-ಚಾಲಕನ ನಿದ್ದೆ ಮಂಪರ್‌ನಿಂದ ನಡೀತಾ ಆಕ್ಸಿಡೆಂಟ್?

Public TV
2 Min Read
CHIKKABALLAPUR ACCIDENT

ಚಿಕ್ಕಬಳ್ಳಾಪುರ: ರಾತ್ರಿ ಒಂದು ಟ್ರಿಪ್ ಗೊರೆಂಟ್ಲಾಗೆ (Accident In Chikkaballapur) ಬಂದು ಬೆಂಗಳೂರು ಹೋಗಿ ಮತ್ತೊಂದು ಟ್ರಿಪ್ ಬೆಳಗ್ಗಿನ ಜಾವ ಬೆಂಗಳೂರಿನಿಂದ ಗೊರಾಂಟ್ಲಾಗೆ ಬರುತ್ತಿದ್ದಾಗ ಈ ಅವಘಡ ನಡೆದಿದೆ. ಹೀಗಾಗಿ ನಿದ್ದೆ ಮಂಪರಿನಲ್ಲಿ ಈ ಘಟನೆ ನಡೆಯಿತಾ ಎಂಬ ಅನುಮಾನವೊಂದು ಹುಟ್ಟಿಕೊಂಡಿದೆ.

ಚಿಕ್ಕಬಳ್ಳಾಪುರ ಚಿತ್ರಾವತಿ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಗೆ ಕಾರು ಡಿಕ್ಕಿಯಾಗಿ ಚಾಲಕ ಸೇರಿ 13 ಮಂದಿ ಸಾವನ್ನಪ್ಪಿದ್ದರು. ದೊಡ್ಡಬಳ್ಳಾಪುರ ನಗರದ ಅರುಣಾ, ನವೀನ್ ಕುಮಾರ್ (32), ಕಾವಲಬೈರಸಂದ್ರದ ನರಸಿಂಹ ಮೂರ್ತಿ ಹಾಗೂ ಇವರ ತಂದೆ ಕೃಷ್ಣಪ್ಪ (37), ಕಲಿಗೆರೆ ಗ್ರಾಮದ ನರಸಿಂಹಪ್ಪ (40), ದೊಡ್ಡಬಳ್ಳಾಪುರ ನಗರದ ಹೃತ್ವಿಕ್ (6), ಈತನ ತಾಯಿ ಅರುಣ, ತಂದೆ ನವೀನ್ ಕುಮಾರ್, ಅನಂತಪುರದ ಪೆರಿಮಿಳಿ ಪವನ್ ಕುಮಾರ್ (32), ಇವರ ತಂದೆ ಪೆರಿಮಿಳಿ ನಾಗಭೂಷಣ್, ಬೆಂಗಳೂರಿನ ಸುಬ್ಬಮ್ಮ, ಇವರ ಪತಿ ವೆಂಕಟನಾರಾಯಣ, ಬೆಂಗಳೂರಿನ ಶಾಂತಮ್ಮ, ಪತಿ ಶಂಕರಪ್ಪ (37), ಬೆಂಗಳೂರಿನ ರಾಜವರ್ಧನ್ ಮೃತ ಶಾಂತಮ್ಮ ಪುತ್ರ (15), ಶಂಕರಪ್ಪ, ಆಂಧ್ರಪ್ರದೇಶದ ಮರಕೋರಪಲ್ಲಿಯ ನಾರಾಯಣಪ್ಪ (50), ಆಂಧ್ರಪ್ರದೇಶದ ಹಿಂದೂಪುರ ಸತ್ಯಸಾಯಿ ಜಿಲ್ಲೆಯ ಬೆಲ್ಲಾಲ ವೆಂಕಟಾದ್ರಿ(32), ಪತ್ನಿ ಬೆಲ್ಲಾಲ ಲಕ್ಷ್ಮಿ, ಆಂಧ್ರಪ್ರದೇಶದ ಗಣೇಶ್ (17), ತಂದೆ ಮುನಿಕೃಷ್ಣ ಮೃತ ದುರ್ದೈವಿಗಳಾಗಿದ್ದಾರೆ.

13 ಮಂದಿಯ ಸಾವಿಗೂ ಚಾಲಕನೇ ಕಾರಣವಾದ್ನಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಕಾರಣ ಗೋರೆಂಟ್ಲಾದಿಂದ ಬೆಂಗಳೂರಿಗೆ ಪ್ಯಾಸೆಂಜರ್ಸ್ ಪಿಕ್ ಅಪ್ ಮಾಡುವ ಚಾಲಕ ನರಸಿಂಹಪ್ಪ, ಕಳೆದ ರಾತ್ರಿ ಪ್ರಯಾಣಿಕರನ್ನು ತುಂಬಿಕೊಂಡು ಬೆಂಗಳೂರಿಗೆ ಬಂದು ಹೋಗಿದ್ದ. ಇನ್ನೂ ಬೆಳಗ್ಗೆ ಹಾಗೆಯೇ ಮರಳಿ ಪ್ರಯಾಣಿಕರನ್ನ ತುಂಬಿಕೊಂಡು ಬೆಂಗಳೂರಿಗೆ ಬಂದಿದ್ದ. ಹೀಗಾಗಿ ಸರಿಯಾಗಿ ನಿದ್ದೆಯಿಲ್ಲದ ಕಾರಣ ಇಡೀ ರಾತ್ರಿ ವಾಹನ ಚಾಲನೆ ಮಾಡಿದ ಪರಿಣಾಮ ನಿದ್ದೆ ಮಂಪರೇ ಅಪಘಾತಕ್ಕೆ ಕಾರಣವಾಯಿತಾ ಅನ್ನೋ ಪ್ರಶ್ನೆ ಎದುರಾಗಿದೆ. ಇನ್ನೂ ಪ್ರಕರಣದಲ್ಲಿ ಗೋರೆಂಟ್ಲ ಮೂಲದ ಕರೇಕಲ್ಲ ಗ್ರಾಮದ ಚಾಲಕ ನರಸಿಂಹಪ್ಪ ಸಹ ಮೃತಪಟ್ಟಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article