ಬೆಂಗಳೂರು: ಅಸೆಂಬ್ಲಿ ಎಲೆಕ್ಷನ್‍ಗೆ ಸರಿಯಾಗಿ ಇನ್ನೊಂದು ವರ್ಷ ಕೂಡ ಇಲ್ಲ. ಇಂತಹ ಹೊತ್ತಲ್ಲಿ ಮಂತ್ರಿ ಸ್ಥಾನಕ್ಕಾಗಿ ರಾಜ್ಯ ಬಿಜೆಪಿಯಲ್ಲಿ ಫೈಟಿಂಗ್ ಶುರುವಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇರುವ ಬಿಜೆಪಿ ಹೈಕಮಾಂಡ್‍ಗೆ ಸದ್ಯ ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆಯೋ..? ಪುನಾರಚನೆಯೋ ವಿಳಂಬ ಆಗಿದೆ. ಆದರೆ ಇದನ್ನು ಸಹಿಸಿಕೊಳ್ಳೋಕೆ ಸಚಿವ ಸ್ಥಾನದ ಆಕಾಂಕ್ಷಿಗಳು ರೆಡಿ ಇಲ್ಲ. ಕ್ಯಾಬಿನೆಟ್‍ಗೆ ಸರ್ಜರಿ ಈಗಲೇ ಆಗ್ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇದಕ್ಕೆ ಸಂಬಂಧಿಸಿ ಪಕ್ಷದಲ್ಲಿ ಹತ್ತಾರು ಬೆಳವಣಿಗೆ ನಡೆದಿವೆ. ಭಿನ್ನಮತೀಯ ಚಟುವಟಿಕೆಗಳು ಶುರುವಾದಂತಿವೆ.
Advertisement
Advertisement
ಪರಸ್ಪರ ಕತ್ತಿ ಮಸೆಯುತ್ತಿದ್ದವರು ಈಗ ನಾನು-ನೀನು ಒಂದು ಎಂದು ಎಂಬ ರಾಗ ಹಾಡ್ತಾ ಇದ್ದಾರೆ. ಸಚಿವ ರೇಣುಕಾಚಾರ್ಯರ ಆಕ್ರೋಶದ ಕಟ್ಟೆ ಒಡೆದಿದೆ. ಪದೇ ಪದೇ ಅಧಿಕಾರ ಅನುಭವಿಸ್ತಿರೋ ಹಿರಿಯರ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ. ಮೈತ್ರಿ ಸರ್ಕಾರ ಪತನ ಮಾಡ್ದೋರು ನಾವು, ನಮಗೆ ಸಚಿವರಾಗಲು ಯೋಗ್ಯತೆ ಇಲವಾ ಎಂದು ಕೇಳಿದ್ದಾರೆ. ಪದೇ ಪದೇ ನಮಗೆ ಅವಮಾನ ಆಗ್ತಿದೆ. ಇದು ಚುನಾವಣೆ ವರ್ಷ ವಿಳಂಬ ಮಾಡ್ಬೇಡಿ, ಯುವಕರಿಗೂ ಅವಕಾಶ ಕೊಡಿ ಎನ್ನುತ್ತಾ ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ ಬ್ಯಾಟ್ ಮಾಡಿದ್ದಾರೆ. ಇದನ್ನೂ ಓದಿ: ಗಾಯಾಳುವನ್ನು ಬೆಂಗಾವಲು ವಾಹನದಲ್ಲಿ ಸಾಗಿಸಿ ಚಿಕಿತ್ಸೆ- ಮಾನವೀಯತೆ ಮೆರೆದ ಮಾಧುಸ್ವಾಮಿ
Advertisement
Advertisement
ಶಾಸಕ ಯತ್ನಾಳ್ ಕೂಡ 15 ದಿನದಲ್ಲಿ ಸಂಪುಟ ಪುನರ್ ರಚನೆ ಮಾಡಿ ಎಂದು ಒತ್ತಾಯಿಸಿದ್ದಾರೆ. ರೇಣುಕಾಚಾರ್ಯರನ್ನು ಭೇಟಿ ಮಾಡಿದ್ರಲ್ಲಿ ತಪ್ಪೇನಿದೆ. ಅವರೇನು ದಾವೂದ್ ಅಲ್ಲ, ಓವೈಸಿನೂ ಅಲ್ಲ ಎಂದಿದ್ದಾರೆ. ಮಾರ್ಚ್, ಏಪ್ರಿಲ್‍ಗೆ ಸಂಪುಟ ಸರ್ಜರಿ ಮಾಡೋದ್ರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಮಂತ್ರಿ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಜಿಹೆಚ್ ತಿಪ್ಪಾರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ವಿಷ ಕೊಟ್ಬಿಡ್ರಿ ಆದ್ರೆ ಲಸಿಕೆ ಮಾತ್ರ ಬೇಡ: ಆರೋಗ್ಯ ಸಿಬ್ಬಂದಿಗೆ ಮಹಿಳೆ ಖಡಕ್ ಮಾತು
ಬೊಮ್ಮಾಯಿ ಸಂಪುಟ ಕೇವಲ ಕೆಲವೇ ಸಮುದಾಯಕ್ಕೆ ಸೀಮಿತವಾಗಿದೆ. ಸಾಮಾಜಿಕ, ಪ್ರಾದೇಶಿಕ ನ್ಯಾಯ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಬಳ್ಳಾರಿ ರಾಜಕೀಯ ಸಮೀಕರಣಗಳು ಬದಲಾಗ್ತಿವೆ. ಆನಂದ್ ಸಿಂಗ್- ಶ್ರೀರಾಮುಲು- ಜನಾರ್ದನ ರೆಡ್ಡಿ ಒಂದಾಗುವ ಸಾಧ್ಯತೆ ಇದೆ. ನಿನ್ನೆ ರಾಮುಲು-ಆನಂದ್ ಸಿಂಗ್ ರಹಸ್ಯ ಚರ್ಚೆ ನಡೆಸಿದ್ದಾರೆ.