ತುಮಕೂರು: ರಸ್ತೆ ಪಕ್ಕದ ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.
ಪಾವಗಡ ಪಟ್ಟಣದ ಟೋಲ್ ಗೇಟ್ ಮುಂಭಾಗದ ಚರಂಡಿಯಲ್ಲಿ ಎರಡು ದಿನಗಳ ನವಜಾತ ಗಂಡು ಶಿಶುವನ್ನು ಅಪರಿಚಿತರು ಎಸೆದು ಹೋಗಿದ್ದಾರೆ. ಶುಕ್ರವಾರ ಸುರಿದ ಮಳೆಯ ರಭಸಕ್ಕೆ ಚರಂಡಿಯಲ್ಲೇ ಶವ ಸಿಲುಕಿಕೊಂಡಿದೆ.
Advertisement
ಪೌರ ಕಾರ್ಮಿಕರು ಇಂದು ಚರಂಡಿ ಸ್ವಚ್ಛಗೊಳಿಸುವಾಗ ಈ ಘಟನೆ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಶಿಶುವಿನ ಮೃತದೇಹ ಪತ್ತೆಯಾಗಿದೆ.
Advertisement
ಸ್ಥಳಕ್ಕೆ ಪುರಸಭೆಯ ಆರೋಗ್ಯಾಧಿಕಾರಿಗಳು ಹಾಗೂ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement