ಚಂಡೀಗಢ: ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಾವು ಸಿಕ್ಕ ಘಟನೆ ಹರಿಯಾಣದ ಫರೀದಾಬಾದ್‍ನಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಇಲ್ಲಿನ ರಾಜ್ಕೀಯ ಗರ್ಲ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಗುರುವಾರದಂದು ಮಕ್ಕಳಿಗೆ ನೀಡಲಾಗಿದ್ದ ಕಿಚಡಿಯಲ್ಲಿ ಸತ್ತ ಮರಿಹಾವು ಪತ್ತೆಯಾಗಿದೆ. ಆದ್ರೆ ಹಾವು ಪತ್ತೆಯಾಗುವುದಕ್ಕೂ ಮುನ್ನ ಹಲವು ವಿದ್ಯಾರ್ಥಿಗಳು ಈ ಊಟವನ್ನ ಸೇವಿಸಿದ್ದರು. ಓರ್ವ ವಿದ್ಯಾರ್ಥಿನಿಗೆ ವಾಂತಿಯಾಗಿದ್ದು. ಇನ್ನೂ ಕೆಲವು ವಿದ್ಯಾರ್ಥಿಗಳು ಆರೋಗ್ಯ ಹದಗೆಟ್ಟ ಬಗ್ಗೆ ದೂರಿದ್ದರು.
Advertisement
ಶಾಲೆಯ ಪ್ರಾಂಶುಪಾಲರಾದ ಬ್ರಜ್ ಬಾಲಾ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಊಟವನ್ನ ಇಸ್ಕಾನ್ ಸಂಸ್ಥೆ ಪೂರೈಕೆ ಮಾಡಿತ್ತು. ಹಾವು ಪತ್ತೆಯಾದ ಕೂಡಲೇ ನಾವು ಮಕ್ಕಳಿಗೆ ಊಟ ಸೇವಿಸದಂತೆ ತಡೆದೆವು. ನಂತರ ಇಸ್ಕಾನ್‍ನವರಗೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.
Advertisement
ಇದೇ ಊಟವನ್ನ ಪೂರೈಸಲಾಗಿದ್ದ ಇತರೆ ಶಾಲೆಗಳಿಗೂ ಊಟವನ್ನ ಬಡಿಸದಂತೆ ಮಾಹಿತಿ ನೀಡಲಾಗಿದೆ. ಕೆಲವು ಬಾರಿ ಊಟ ಹಳಸಿದಂತಾಗಿರುತ್ತದೆ ಅಂತ ವಿದ್ಯಾರ್ಥಿಗಳು ದೂರಿದ್ದಾರೆ.
Advertisement
ಈ ಬಗ್ಗೆ ಇಸ್ಕಾನ್ ಸಂಸ್ಥೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ನಾವು ಸ್ವಚ್ಛವಾದ ಅಡುಗೆ ಮನೆಯಲ್ಲೇ ಆಹಾರ ಸಿದ್ಧಪಡಿಸಿದ್ದೇವೆ. ಊಟವನ್ನ ಕಳಿಸೋ ಮುನ್ನ ಪರಿಶೀಲಿಸಲಾಗಿತ್ತು. ತೊಂದರೆ ಇರುವುದು ಶಾಲೆಗಳಲ್ಲಿ. ಊಟದ ಪಾತ್ರೆಗಳ ಮೇಲೆ ಏನೂ ಮುಚ್ಚದೆ ತೆರೆದಿಟ್ಟಿದ್ದರು ಎಂದು ತಿಳಿಸಿದ್ದಾರೆ.
Advertisement
#Visuals: A small snake found in mid-day meal at a government school at NH-2 in Faridabad, Haryana (May 11). pic.twitter.com/PlFqmNQrx3
— ANI (@ANI_news) May 12, 2017
Haryana: A small snake found in mid-day meal at a Government Girls Senior Secondary School at NH-2 in Faridabad. (May 11). pic.twitter.com/G99n3tDTv7
— ANI (@ANI_news) May 12, 2017