ಮಂಗಳೂರು: ಸತ್ತ ಶಾರ್ಕ್ ಮೀನೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕ ಬೀಚ್‍ನಲ್ಲಿ ಪತ್ತೆಯಾಗಿದೆ.
ಸಮುದ್ರ ದಡದಲ್ಲಿ ಶಾರ್ಕ್ ಮೀನು ಬಂದು ಬಿದ್ದಿತ್ತು. ಇಂದು ಬೆಳಗ್ಗೆ ಶಾರ್ಕ್ ಮೀನನ್ನು ಕಂಡ ಕಡಲವಾಸಿಗಳು ದಡದಿಂದ ಮೇಲಕೆತ್ತಲು ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಅಲೆಗಳ ಅಬ್ಬರಿಂದ ಸುರತ್ಕಲ್ ಮುಕ್ಕ ಬೀಚ್ ಬಳಿ ಡಾಲ್ಫಿನ್ ಮೀನುಗಳು ಬರುತ್ತಿದ್ದವು. ಆದರೆ ಅಪರೂಪ ಎಂಬಂತೆ ಶನಿವಾರ ರಾತ್ರಿಯೇ ಸತ್ತ ಶಾರ್ಕ್ ಮೀನೊಂದು ದಡದ ಬಳಿ ಬಂದು ಬಿದ್ದಿದೆ.
Advertisement
Advertisement
ಇಂದು ಬೀಚ್‍ನ ಬಳಿ ಕಡಲವಾಸಿಗಳು ಹೋದಾಗ ಈ ಶಾರ್ಕ್ ಮೀನು ಪತ್ತೆಯಾಗಿದೆ. ಬಳಿಕ ಅವರೆಲ್ಲರೂ ಸೇರಿ ಸತ್ತ ಶಾರ್ಕ್ ಮೀನನ್ನು ದಡದಿಂದ ಮೇಲೆತ್ತಿದ್ದಾರೆ. ಈ ರೀತಿಯ ಸತ್ತ ಮೀನುಗಳು ಪತ್ತೆಯಾದ ದಡದ ಪಕ್ಕದಲ್ಲೇ ಮೀನುಗಳನ್ನು ಹೂಳುತ್ತಾರೆ. ಈ ಹಿಂದೆ ಡಾಲ್ಫಿನ್ ಮೀನುಗಳೂ ಸತ್ತು ದಡ ಸೇರಿತ್ತು. ಅವುಗಳನ್ನು ಸಹ ಕಡಲ ಬಳಿಯೇ ಹೂಳಲಾಗಿತ್ತು.
Advertisement
ಇತ್ತೀಚೆಗೆ ವಾಯು ಚಂಡಮಾರುತದ ಎಫೆಕ್ಟ್ ನಿಂದಾಗಿ ಮಂಗಳೂರಿನಲ್ಲಿ ರಕ್ಕಸ ಗಾತ್ರದ ಅಲೆಗಳು ಎದ್ದಿದ್ದು, ಉಳ್ಳಾಲದ ರೆಸಾರ್ಟ್ ಶೌಚಾಲಯದ ಕಟ್ಟಡ ನೋಡ ನೋಡುತ್ತಿದ್ದಂತೆಯೇ ನೆಲಸಮವಾಗಿತ್ತು.