ರಾಯಚೂರು: ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿದ್ದ (Engagement) ಯುವತಿಯೊಬ್ಬಳ ಶವ ಅನುಮಾನಾಸ್ಪದವಾಗಿ ಮನೆಯ ಬೆಡ್ ರೂಮ್‍ನಲ್ಲಿ ಪತ್ತೆಯಾಗಿರುವ ಘಟನೆ ತಾಲ್ಲೂಕಿನ (Raichur) ಯರಮರಸ್ ಬಳಿಯ ದಂಡ್ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಸುನೀತಾ (26) ಎಂದು ಗುರುತಿಸಲಾಗಿದೆ. ಯುವತಿಯ ಶವ ರೂಮ್‍ನಲ್ಲಿ ರಕ್ತ ಸಿಕ್ತವಾಗಿ ಪತ್ತೆಯಾಗಿದ್ದು, ಯುವತಿ ದೇಹದ ಮೇಲೆ ಚಾಕುವಿನಿಂದ ಹಲ್ಲೆಯಾದ ಗುರುತುಗಳು ಕಂಡು ಬಂದಿದೆ. ಯುವತಿಯ ಸಾವು ಕೊಲೆ ಎಂಬ ಸಂಶಯ ವ್ಯಕ್ತಪಡಿಸಿ ಆಕೆಯ ಅಕ್ಕ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬೈರತಿ ಬಸವರಾಜ್ ಕಾರು ಪಲ್ಟಿ – ಚಾಲಕ, ಗನ್ ಮ್ಯಾನ್‍ಗೆ ಗಾಯ
ಇತ್ತೀಚೆಗಷ್ಟೇ ಯುವತಿಯ ನಿಶ್ಚಿತಾರ್ಥವಾಗಿತ್ತು. ಒಲ್ಲದ ಮನಸ್ಸಿನಿಂದ ಯುವತಿ ಮದುವೆಗೆ ಒಪ್ಪಿಕೊಂಡಿದ್ದಳು. ಮನೆಯವರ ಮದುವೆ ಪ್ರಸ್ತಾಪಕ್ಕೆ ಯುವತಿ ಮನನೊಂದಿದ್ದಳು ಎಂದು ತಿಳಿದು ಬಂದಿದೆ.
ಈ ಸಂಬಂಧ ರಾಯಚೂರು ಗ್ರಾಮಾಂತರ ಪೊಲೀಸ್ (Raichur Police) ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಗುಂಡೇಟು