ಮಡಿಕೇರಿ: ನಗರದ ಅರಣ್ಯ ಭವನದ (Aranya Bhavan) ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಶಿಶುವಿನ ಜನನವಾಗಿ ಎರಡು ವಾರಗಳಾಗಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮಡಿಕೇರಿ ನಗರ ಠಾಣಾ ಪೊಲೀಸರು (Madikeri City Police) ಪ್ರಕರಣ ದಾಖಲಿಸಿಕೊಂಡು ತನಿಖೆ ಮಡೆಸಲು ಮುಂದಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅರಣ್ಯ ಭವನ ಸಮೀಪದಲ್ಲಿ ಇರುವಂತಹ ಹಿಂದೂ ರುದ್ರಭೂಮಿಯಲ್ಲಿ ನವಜಾತ ಶಿಶುವಿನ ಮೃತದೇಹ ಹೂತ್ತಿಟ್ಟ ಬಟ್ಟೆ ಪತ್ತೆಯಾಗಿತ್ತು. ಹೂತ್ತಿಟ್ಟ ಮಗುವನ್ನ ನಾಯಿ ಎಳೆದುಕೊಂಡು ಹೋಗಿರುವ ಶಂಕೆಯೂ ವ್ಯಕ್ತವಾಗಿತ್ತು. ಇದಾದ 2 ದಿನಗಳಲ್ಲೇ ಅರಣ್ಯ ಭವನದ ಮುಂಭಾಗ ಮೃತದೇಹ ಪತ್ತೆಯಾಗಿದೆ.
ಸದ್ಯ ಮಡಿಕೇರಿ ನಗರ ಠಾಣಾ ಪೊಲೀಸ್, ಶಿಶು ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಶಿಶುವಿನ ಮೃತದೇಹವನ್ನ ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಅಲ್ಲದೇ ಮೃತಪಟ್ಟ ಮಗು ಯಾರದ್ದು ಅನ್ನೋದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

