Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – ಕೈ ಮೇಲಿನ ಹಚ್ಚೆಯಿಂದ ಅಸಲಿ ಸತ್ಯ ಬಯಲು

Public TV
Last updated: January 18, 2023 1:02 pm
Public TV
Share
2 Min Read
bengaluru 1
SHARE

ಬೆಂಗಳೂರು: ಇತ್ತೀಚೆಗೆ ಹೊಸಕೋಟೆಯ (Hoskote) ಅಮಾನಿಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಒಂದು ಪತ್ತೆಯಾಗಿತ್ತು. ಶವ ಪತ್ತೆಯಾದ 24 ಗಂಟೆಯಲ್ಲಿ ಪೊಲೀಸರು ಘಟನೆಯ ಅಸಲಿಯತ್ತನ್ನು ಪತ್ತೆ ಹಚ್ಚಿದ್ದಾರೆ.

ಜನವರಿ 6 ರಂದು ನಾಪತ್ತೆಯಾಗಿದ್ದ 30 ವರ್ಷದ ಯುವಕನನ್ನು ದುಷ್ಕರ್ಮಿಗಳು ಬೇರೆಡೆ ಕರೆದುಕೊಂಡು ಹೋಗಿ ಕೊಲೆ (Murder) ಮಾಡಿ ಕೆರೆಯಲ್ಲಿ (Lake) ಶವವನ್ನು ಎಸೆದಿದ್ದರು. ಇದೀಗ ಪೊಲೀಸರು ಹಂತಕರ ಹೆಡೆಮುರಿಕಟ್ಟಿದ್ದಾರೆ. ಮೃತ ವ್ಯಕ್ತಿಯ ಕೈ ಮೇಲಿದ್ದ ಹಚ್ಚೆಯಿಂದ (Tattoo) ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

bengaluru Hoskote Murder 1

ಜನವರಿ 1 ರಂದು ನಂದಿನಿ ಲೇಔಟ್ ನಿವಾಸಿ ಗೋಪಾಲ ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದರು. ಆದರೆ 6-7 ದಿನಗಳಾದರೂ ಅವರು ಮನೆಗೆ ವಾಪಾಸಾಗಿರಲಿಲ್ಲ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.

ಇದೇ ವೇಳೆ ಹೊಸಕೋಟೆಯ ಅಮಾನಿಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಅವಲಹಳ್ಳಿ ಪೊಲೀಸರು ಶವದ ಗುರುತು ಪತ್ತೆ ಕಾರ್ಯ ಪ್ರಾರಂಭಿಸಿದ್ದರು. ಮೃತದೇಹದ ಪರಿಶೀಲನೆ ವೇಳೆ ಎಡಗೈ ಮೇಲೆ ಅಮ್ಮ, ಸಾರ ಅನ್ನೋ ಹಚ್ಚೆ ಪತ್ತೆಯಾಗಿತ್ತು. ಅಲ್ಲದೇ ಬಲಗೈ ಮೇಲೆ ಯಶು ಎಂಬ ಹಚ್ಚೆಯೂ ಪತ್ತೆಯಾಗಿತ್ತು. ಕೈಯ ಒಂದೊಂದು ಬೆರಳುಗಳಲ್ಲಿ ಒಂದೊಂದೇ ಅಕ್ಷರದಂತೆ ರಾಧೆ ಎಂದು ಬರೆಯಲಾದ ಹಚ್ಚೆಯೂ ಇತ್ತು. ಇವೆಲ್ಲವನ್ನೂ ಕಂಡ ಪೊಲೀಸರಿಗೆ ಇದು ಹೆಣ್ಣಿನ ವಿಚಾರಕ್ಕೆ ನಡೆದಿರುವ ಕೊಲೆ ಎಂಬ ಸಂಶಯ ಮೂಡಿತ್ತು.

bengaluru Hoskote Murder 2

ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮುನಿಯ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಗೋಪಾಲ ಕಿಚಾಯಿಸಿದ್ದ ಎನ್ನಲಾಗಿದೆ. ಕಳೆದ 4 ವರ್ಷಗಳಿಂದ ಆರೋಪಿ ಮುನಿಯ ಪ್ರೀತಿಸುತ್ತಿದ್ದ ಹುಡುಗಿಯ ಮೇಲೆ ಗೋಪಾಲ ಕಣ್ಣು ಹಾಕಿದ್ದ. ಆಕೆಯ ಬೆನ್ನು ಬಿದ್ದಿದ್ದರಿಂದ ಮುನಿಯ ಗೋಪಾಲನ ಮೇಲೆ ಸಿಟ್ಟಾಗಿದ್ದ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೈಟೆನ್ಶನ್ ವೈಯರ್‌ಗೆ ಬಾಲಕ ಬಲಿ

ಜನವರಿ 1 ರಂದು ಕೆಲಸಕ್ಕೆ ಹೋಗಿದ್ದ ಗೋಪಾಲನನ್ನು ಮುನಿಯ ತನ್ನ ಸ್ನೇಹಿತರೊಂದಿಗೆ ಕರೆದೊಯ್ದು ಪಾರ್ಟಿ ಮಾಡಿದ್ದ. ಬಳಿಕ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಮುನಿಯ ಗೋಪಾಲನ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆಸಿದ್ದ. ಗೋಪಾಲನ ಹತ್ಯೆ ನಡೆಸಿದ ಬಳಿಕ ದುಷ್ಕರ್ಮಿಗಳು ಹೊಸಕೋಟೆ ಅಮಾನಿಕೆರೆಗೆ ಶವವನ್ನು ಎಸೆದು ಪರಾರಿಯಾಗಿದ್ದರು.

bengaluru Hoskote Murder

ಇದೀಗ ಪೊಲೀಸರು ತನಿಖೆ ನಡೆಸಿ, ಮುನಿಯ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಮಾಕ್ಷಿ ಪಾಳ್ಯದಲ್ಲೊಂದು ವಿಚಿತ್ರ ಕೊಲೆ- ತಾನು ನಿಲ್ಲಿಸಿದ್ದ ಜಾಗದಲ್ಲಿ ಬಸ್ ನಿಲ್ಲಿಸಿದ್ದಕ್ಕೆ ಮರ್ಡರ್

Live Tv 
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:bengaluruhoskotemanMurderಕೊಲೆಬೆಂಗಳೂರುಯುವಕಹೊಸಕೋಟೆ
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
3 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
3 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
4 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
5 hours ago

You Might Also Like

DK Shivakumar 6
Bengaluru City

ಅಹಮದಾಬಾದ್ ವಿಮಾನ ಪತನ ದುರದುಷ್ಟಕರ ಘಟನೆ: ಡಿ.ಕೆ ಶಿವಕುಮಾರ್

Public TV
By Public TV
39 seconds ago
Ahmedabad Planecrash
Latest

ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

Public TV
By Public TV
5 minutes ago
Boeing 787 air india dreamliner
Latest

ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌,? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

Public TV
By Public TV
7 minutes ago
Air India Crash CM Siddaramaiah
Bengaluru City

ಏರ್‌ ಇಂಡಿಯಾ ವಿಮಾನ ದುರಂತ – ಸಂತಾಪ ಸೂಚಿಸಿದ ಸಿದ್ದರಾಮಯ್ಯ

Public TV
By Public TV
9 minutes ago
Ahmedabad Air India Air Crash
Latest

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

Public TV
By Public TV
24 minutes ago
Air India Flight Crash
Latest

ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

Public TV
By Public TV
25 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?