ಲಕ್ನೋ: ಕಳೆದ ತಿಂಗಳು ದೆಹಲಿಯಲ್ಲಿ (Delhi) ಯುವತಿಯೊಬ್ಬಳನ್ನು ಕಾರೊಂದು (Car) ಹಲವು ಕಿ.ಮೀ ವರೆಗೆ ಎಳೆದುಕೊಂಡು ಹೋಗಿ ಆಕೆಯ ಸಾವಿಗೆ ಕಾರಣವಾದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತು. ಇದೀಗ ಅಂತಹುದೇ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರ ಪ್ರದೇಶದ ನೋಯ್ಡಾ ಕಡೆಗೆ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ (Yamuna Expressway) ಚಲಿಸುತ್ತಿದ್ದ ಕಾರಿನ ಹಿಂಬದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕಂಡುಬಂದಿದೆ. ವ್ಯಕ್ತಿ ಕಾರಿನ ಹಿಂಬದಿ ಸಿಲುಕಿಕೊಂಡು, ಎಳೆದುಕೊಂಡು ಹೋಗುತ್ತಿದ್ದ ರೀತಿಯಲ್ಲಿ ಕಂಡುಬಂದಿರುವುದಾಗಿ ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಕಾರು ಆಗ್ರಾದಿಂದ ನೋಯ್ಡಾ ಕಡೆಗೆ ಹೋಗುತ್ತಿದ್ದಾಗ ಮಥುರಾದ ಮಂತ್‌ನಲ್ಲಿರುವ ಟೋಲ್ ಬೂತ್‌ನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಕಾರನ್ನು ದೆಹಲಿ ಮೂಲದ ವೀರೇಂದ್ರ ಸಿಂಗ್ ಚಲಾಯಿಸುತ್ತಿದ್ದು, ಆತನನ್ನು ಪ್ರಸ್ತುತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಕಳೆದ ರಾತ್ರಿ ಎಕ್ಸ್‌ಪ್ರೆಸ್‌ವೇಯಲ್ಲಿ ದಟ್ಟವಾದ ಮಂಜು ಇದ್ದ ಕಾರಣ ಸ್ಪಷ್ಟವಾಗಿ ಏನೂ ಕಾಣಿಸುತ್ತಿರಲಿಲ್ಲ. ಇದರಿಂದ ಅಪಘಾತಕ್ಕೆ ಒಳಗಾದ ವ್ಯಕ್ತಿ ಕಾರಿನ ಹಿಂಬದಿ ಸಿಲುಕಿಕೊಂಡಿರುವುದು ತಿಳಿದಿರಲಿಲ್ಲ ಎಂದು ವೀರೇಂದ್ರ ಸಿಂಗ್ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 13ರ ಬಾಲಕಿಗೆ 114 ಬಾರಿ ಇರಿದು ಕೊಂದ ಸಹಪಾಠಿ ತಪ್ಪೊಪ್ಪಿಗೆ
Advertisement
ಇದೀಗ ಆರೋಪಿ ವೀರೇಂದ್ರನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಸಾಕ್ಷಿಗಳಿಗೆ ರಸ್ತೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಭೀಕರ ಘಟನೆಯಿಂದಾಗಿ ಸುತ್ತಮುತ್ತಲ ಗ್ರಾಮದ ಜನರು ಭಯಭೀತರಾಗಿದ್ದಾರೆ.
ಈ ವರ್ಷ ಜನವರಿ 1 ರಂದು ಇದೇ ರೀತಿಯ ಭೀಕರ ಘಟನೆ ದೆಹಲಿಯಲ್ಲಿ ನಡೆದಿತ್ತು. ಯುವತಿ ಅಂಜಲಿ ಸಿಂಗ್ ಹೊಸ ವರ್ಷಾಚರಣೆ ಬಳಿಕ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ತನ್ನ ಸ್ಕೂಟರ್‌ಗೆ ಕಾರೊಂದು ಡಿಕ್ಕಿಹೊಡೆದಿತ್ತು. ಪರಿಣಾಮ ಆಕೆ ಕಾರಿನಡಿ ಸಿಲುಕಿ ಹಲವು ಕಿ.ಮೀ. ವರೆಗೆ ಎಳೆದುಕೊಂಡು ಹೋಗಲ್ಪಟ್ಟಿದ್ದಳು. ಬಳಿಕ ಆಕೆಯ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ಬಂಧಿಸಿದ್ದರು. ಇದನ್ನೂ ಓದಿ: ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k