ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

Public TV
1 Min Read
PUNJAB TRUNK

ಚಂಡೀಗಢ: ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ (Sisters) ಮೃತದೇಹ ತಮ್ಮ ಮನೆಯಲ್ಲಿಯೇ ಟ್ರಂಕ್‌ನಲ್ಲಿ (Trunk) ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್ (Jalandhar) ಜಿಲ್ಲೆಯ ಕಾನ್ಪುರ (Kanpur) ಗ್ರಾಮದಲ್ಲಿ ನಡೆದಿದೆ.

ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ. ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು ಐವರು ಮಕ್ಕಳಿದ್ದರು. ಕೆಲಸದಿಂದ ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

police jeep

ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ. ಮರುದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ತಿಳಿದುಬಂದಿದೆ. ಈ ವೇಳೆ ಟ್ರಂಕ್ ಅನ್ನು ತೆರದಾಗ ಮೂವರು ಬಾಲಕಿಯರ ಮೃತದೇಹಗಳು ಅದರಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

ಬಾಲಕಿಯರ ಸಾವು ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಹೋದರಿಯರ ಸಾವಿನ ಕಾರಣವನ್ನು ತಿಳಿಯಲು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಬಾಲಕಿಯರ ತಂದೆಗೆ ಕುಡಿತದ ಚಟವಿದ್ದು, ಮನೆಯ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article